ಗುಡ್ಡೆಹೊಸೂರು, ನ. 10: ಇಲ್ಲಿನ ಗ್ರಾಮ ಪಂಚಾಯ್ತಿಯ ತ್ರೈಮಾಸಿಕ ಕೆ.ಡಿ.ಪಿ ಸಭೆಯು ಅಲ್ಲಿನ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕೆÀ್ಷ ಕೆ.ಎಸ್.ಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ತಾ.ಪಂ. ಸದಸ್ಯೆ ಪುಷ್ಪಜನಾರ್ಧನ ಮತ್ತು ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಮತ್ತು ಸರ್ವಸದಸ್ಯರು ಹಾಜರಿದ್ದರು.

ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಕಾವ್ಯ ಇಲಾಖೆಯ ಯೋಜನೆ ಬಗ್ಗೆ ವಿವರಿಸಿದರು. ಜಿ.ಪಂ. ಇಂಜಿನಿಯರ್ ಫಯಾಜ್, ಕೃಷಿ ಇಲಾಖಾಧಿಕಾರಿ ಪೂಣಚ್ಚ, ಆರೋಗ್ಯ ಇಲಾಖಾಧಿ ಕಾರಿಗಳು, ಶಿಕ್ಷಣ ಇಲಾಖಾಧಿ ಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸೆಸ್ಕ್ ಅಧಿಕಾರಿಗಳು ಹಾಜರಿದ್ದರು. ಪ್ರಮುಖವಾಗಿ ನೀರಾವರಿ ಇಲಾಖಾಧಿಕಾರಿಗಳು ಮತ್ತು ಪಡಿತರ ವಿಭಾಗದ ಅಧಿಕಾರಿಗಳು ಸಭೆಗೆ ಗೈರು ಹಾಜರಾದ ಹಿನ್ನೆಲೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಪಿ.ಡಿ.ಓ ಶ್ಯಾಂ ಅವರು ಮಾತನಾಡಿ, ಸ್ಥಳೀಯ ಶಾಲೆಯವರು ಗ್ರಾ.ಪಂ.ಗಳಿಗೆ ವರದಿಗಳನ್ನು ನೀಡದಿರುವದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಈ ವಿಭಾಗದ ಎಲ್ಲಾ ಶಾಲೆಯ ಮುಖ್ಯಶಿಕ್ಷಕರು ಹಾಜರಿದ್ದರು. ಬಸವನಹಳ್ಳಿಯ ನವಗ್ರಾಮಕ್ಕೆ ಸಂಬಂಧಿಸಿದಂತೆ ಸರ್ವೆ ನಂ 1\1ರಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆಯವರು ತಡೆಯೊಡ್ಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿಭಾಗದ ತಾ.ಪಂ. ಸದಸ್ಯೆ ಪುಷ್ಪ ಮತ್ತು ಗ್ರಾ.ಪಂ. ಸದಸ್ಯೆಯಾದ ಡಾಟಿ. ಪುಷ್ಪ ಮತ್ತು ಈ ವಿಭಾಗದ ಸದಸ್ಯರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

-ಗಣೇಶ್‍ಕುಡೆಕ್ಕಲ್.