ಗೋಣಿಕೊಪ್ಪ ವರದಿ, ನ. 10: ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಪಿಯು ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಕೃತಿಕ ವಿಕೋಪ ಪ್ರದೇಶದ ಅಭಿವೃದ್ಧಿ ಬಗ್ಗೆ ಪವರ್ ಪಾಯಿಂಟ್ ಪ್ರದರ್ಶನ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಪ್ರೌಢಶಾಲೆ ಮೂರು ಬಹುಮಾನ ಪಡೆದುಕೊಂಡಿದೆ. ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ, ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆ ಎರಡು ಬಹುಮಾನ ಪಡೆದುಕೊಂಡಿವೆ.

ಪವರ್ ಪಾಯಿಂಟ್ ಪ್ರದರ್ಶನ ಪೈಪೋಟಿಯಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಪ್ರೌಢಶಾಲೆಯ ವಿದ್ಯಾರ್ಥಿನಿ ಪಿ. ಎನ್. ಮನಸ್ವಿ ಪ್ರಥಮ, ಜನರಲ್ ತಿಮ್ಮಯ್ಯ ಶಾಲೆಯ ಪ್ರತ್ಯುಷಾ ಸುರೇಶ್ ದ್ವಿತೀಯ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಆರ್. ವಿಷಾ ತೃತೀಯ ಸ್ಥಾನ ಪಡೆದುಕೊಂಡರು.

ಇಂಗ್ಲೀಷ್ ಚರ್ಚಾ ಸ್ಫರ್ಧೆಯಲ್ಲಿ ಗೋಣಿಕೊಪ್ಪ ಕಾಲ್ಸ್ ಶಾಲೆಯ ಮೋಕ್ಷಾ ದೇಚಮ್ಮ ಪ್ರಥಮ, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸಿ.ಕೆ. ಗ್ರಂಥ ದ್ವಿತೀಯ, ಕೊಡಗು ವಿದ್ಯಾಲಯದ ಡೆಲಿಯಾನ್ ಭೂಮಿಕ್ ತೃತೀಯ ಸ್ಥಾನ ಪಡೆದುಕೊಂಡರು.

ಚರ್ಚಾ ಸ್ಪರ್ಧೆ ಕನ್ನಡ ವಿಭಾಗದಲ್ಲಿ ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆಯ ಕೆ. ಎ. ಶಿಯಬ್ ಪ್ರಥಮ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಎಸ್. ಆರ್. ನಿಕ್ಷೇಪ್ ದ್ವಿತೀಯ, ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆಯ ವರ್ಷಾ ಮುದ್ದಮ್ಮ ತೃತೀಯ ಸ್ಥಾನ ಪಡೆದುಕೊಂಡರು.

ಕಾರ್ಯಕ್ರಮವನ್ನು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚೆಪ್ಪುಡೀರ ಬೆಳ್ಯಪ್ಪ, ಕೊಡಗು ವಿದ್ಯಾಲಯ ಪ್ರಾಂಶುಪಾಲೆ ವಿದ್ಯಾ ಹರೀಶ್ ಉದ್ಘಾಟಿಸಿದರು.

ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ರಾಕೇಶ್ ಪೂವಯ್ಯ, ನಿರ್ದೇಶಕ ಬೊಟ್ಟಂಗಡ ತಿಲಕ್ ಸುಬ್ಬಯ್ಯ, ನಾಪೋಕ್ಲು ಆಂಕುರ್ ವಿದ್ಯಾಸಂಸ್ಥೆ ಪ್ರಾಂಶುಪಾಲ ಕೇಟೋಳಿರ ರತ್ನಾ ಕರುಂಬಯ್ಯ, ಕೂರ್ಗ್ ಇನ್ಸಿಟ್ಯೂಟ್ ಪಿಯು ಕಾಲೇಜು ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬಹುಮಾನ ವಿತರಿಸಿದರು.

ತೀರ್ಪುಗಾರರಾಗಿ ಕೆ.ಕೆ. ಡಯಾನ, ಕೆ. ಸಿ. ತಂಗಮ್ಮ, ಎಂ.ಪಿ. ದೇಚಕ್ಕ, ಕಿಶನ್ ಕರುಂಬಯ್ಯ, ಬಿ.ಜೆ. ರಾಘವೇಂದ್ರ, ಪಿ. ಸುಷ್ಮಿತಾ ಕಾರ್ಯನಿರ್ವಹಿಸಿದರು.