ಕೂಡಿಗೆ, ನ. 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ವ್ಯಾಪ್ತಿಯಲ್ಲಿ ಸತತ ಒಂದೂವರೆ ಗಂಟೆ ಕಾಲ 2 ಇಂಚು ಮಳೆಯಾಗಿದ್ದು, ಭಾರೀ ಮಳೆಗೆ ಕೆಲವು ಕಡೆ ಬೆಳೆಗಳು ನೆಲಕಚ್ಚಿ ನಷ್ಟ ಉಂಟಾಗಿದೆ. ರೈತರು ತಮ್ಮ ಜೋಳವನ್ನು ಮುರಿದು ಮಾರಾಟ ಮಾಡಲು ಇರಿಸಿದ್ದ ಜೋಳವು ಹಾಳಾಗಿವೆ.
ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಬಾಣಾವರ, ಸಿದ್ಧಲಿಂಗಪುರ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಜನರು ಭಯ ಪಡುವಂತಹ ಪರಿಸ್ಥಿತಿ ಉಂಟಾಗಿತ್ತು.