ಮಡಿಕೇರಿ, ನ. 9: ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರಿನ ಬ್ಯಾಂಕಿಂಗ್ ಓಂಬುಡ್ಸ್ಮನ್ ವಿಭಾಗವು ಒಂದು ದಿನದ ಕಾರ್ಯಾಗಾರ ಸಾರ್ವಜನಿಕರಿಗಾಗಿ ನಡೆಸಲು ಆಯೋಜಿಸಿದ್ದು, ತಾ. 11 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬ್ಯಾಂಕಿಂಗ್ ಓಂಬುಡ್ಸ್ಮನ್ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕಿಂಗ್ ಓಂಬುಡ್ಸ್ಮನ್ ಸ್ಕೀಮ್ 2006, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗಾಗಿ ಓಂಬುಡ್ಸ್ಮನ್ ಯೋಜನೆ 2018, ಮತ್ತು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್ಮನ್ ಯೋಜನೆ 2019 ಕುರಿತು ಕಾರ್ಯಾಗಾರ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಬ್ಯಾಂಕ್ ಗ್ರಾಹಕರು, ವಿದ್ಯಾರ್ಥಿಗಳು, ಸ್ವಸಹಾಯ ಗುಂಪುಗಳು, ಮಹಿಳೆಯರು ಭಾಗವಹಿಸಲು ಕೋರಿದೆ. ಈ ಕಾರ್ಯಕ್ರಮದಲ್ಲಿ ಮುಂಬೈನ ಆರ್.ಬಿ.ಐ.ನ ಮುಖ್ಯ ಪ್ರಧಾನ ವ್ಯವಸ್ಥಾಪಕರು ಹಾಗೂ ಓಂಬುಡ್ಸ್ಮನ್, ಕರ್ನಾಟಕ ಮತ್ತು ಓಂಬುಡ್ಸ್ಮನ್, ತಮಿಳುನಾಡು ಹಾಗೂ ಬ್ಯಾಂಕಿನ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಅಗ್ರಣಿ ಬ್ಯಾಂಕ್‍ನ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ತಿಳಿಸಿದ್ದಾರೆ.