ಗೋಣಿಕೊಪ್ಪ ವರದಿ, ನ.8 : ಮನೆಯಿಂದ ಕಾಣೆಯಾಗಿದ್ದ ಅರ್ವತೊಕ್ಲು ಗ್ರಾಮದ ಮೊಣ್ಣಿ (40) ಅಮ್ಮತ್ತಿಯಲ್ಲಿ ಪತ್ತೆಯಾಗಿದ್ದು, ಬುಧವಾರ ಪತ್ತೆಯಾಗಿರುವ ಬಗ್ಗೆ ಸ್ಥಳೀಯರಾದ ಸುವಿನ್ ಗಣಪತಿ ಕರೆ ಮಾಡಿ ಮಾಹಿತಿ ನೀಡಿದ್ದರು. ಇದರಂತೆ ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಶೋಭಾ ಹಾಗೂ ಕೃಷ್ಣ ಅವರುಗಳು ಕರೆ ತಂದು ಕುಟುಂಬ ಸಂಬಂಧಿ ಅಣ್ಣಪ್ಪ ಅವರಿಗೆ ಒಪ್ಪಿಸಿದರು.