ಮಡಿಕೇರಿ, ನ. 8: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತಾ. 9 ರಂದು (ಇಂದು) ತೀರ್ಪು ಪ್ರಕಟಿಸುವದರಿಂದ; ಜಿಲ್ಲಾಧಿಕಾರಿಯವರು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆವರೆಗೆ ಕೊಡಗು ಜಿಲ್ಲಾದ್ಯಂತ ಕಲಂ 144 ಸಿ.ಆರ್.ಪಿ.ಸಿ.ಯನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಅನ್ವಯ 5 ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತೆ ಇಲ್ಲ. ಸಭೆ ಸಮಾರಂಭ, ಮೆರವಣಿಗೆಗಳಿಗೆ ಅವಕಾಶ ಇರುವದಿಲ್ಲ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇಂದು ಶಾಲಾ - ಕಾಲೇಜ್ಗೆ ರಜೆ
ತಾ. 9 ರಂದು (ಇಂದು) ರಾಜ್ಯಾದ್ಯಂತ್ಯ ಶಾಲಾ - ಕಾಲೇಜು ರಜೆ ಘೋಷಿಸಲಾಗಿದ್ದು, ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ಗಳನ್ನು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನಿಗಧಿಯಾಗಿರುವ ಪರೀಕ್ಷೆಗಳಿಗೆ ತಾ. 9ರಂದು (ಇಂದು) ಘೋಷಿಸಲ್ಪಟ್ಟಿರುವ ರಜೆ ಅನ್ವಯಿಸುವದಿಲ್ಲ. ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.