ಚೆಟ್ಟಳ್ಳಿ, ನ. 7: ಸನ್ಮಾರ್ಗದತ್ತ ಒಂದು ಹೆಜ್ಜೆ ಎಂಬ ವಾಟ್ಸಪ್ ಗ್ರೂಪಿನ ವತಿಯಿಂದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ 275 ರೋಗಿಗಳಿಗೆ ಹಣ್ಣು ಹಂಪಲಿನ ಕಿಟ್ಟನ್ನು ವಿತರಿಸಿದರು. ಕೊಡಗು ಜಿಲ್ಲೆಯ ವಿವಿಧ ಭಾಗದ ಯುವಕರು ಸೇರಿ ಸಮಾಜ ಸೇವೆ ಹಾಗೂ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಗ್ರೂಪನ್ನು ರಚಿಸಿರುವದಾಗಿ ಗ್ರೂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸಮದ್ ಮೆಟ್ರೋ ಮಾಹಿತಿ ನೀಡಿದರು.

ಈ ಸಂದರ್ಭ ಶರ್ಫುದ್ದೀನ್ ವೀರಾಜಪೇಟೆ, ಶಂಸು ಮಾದಾಪುರ, ಹಂಸತ್ ಭಾಗಮಂಡಲ, ಅಲ್ತಾಫ್ ಹಾಕತ್ತೂರು, ಮುಸ್ತಫ ಮಡಿಕೇರಿ, ನಿಚ್ಚು ಮೂರ್ನಾಡು ಸೇರಿದಂತೆ ಇತರರು ಇದ್ದರು.