ಶ್ರೀಮಂಗಲ, ನ. 7: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕದಿರು ಬಂದಿರುವ ಭತ್ತದ ಗದ್ದೆಗೆ ನುಗ್ಗಿ ಗದ್ದೆಯಲ್ಲಿದ್ದ ಬೆಳೆಯನ್ನು ದ್ವಂಸ ಮಾಡಿವೆ. ಕುಮಟೂರು ಪೇರ್ಮಾಡು ಗ್ರಾಮದ ಪ್ರಗತಿಪರ ರೈತ ಪೆಮ್ಮಣಮಾಡ ರಮೇಶ್ ಮತ್ತು ಸುಬ್ರಮಣಿ ಸೇರಿದಂತೆ ಪೆಮ್ಮಣಮಾಡ ಕುಟುಂಬದವರ ಭತ್ತದ ಗದ್ದೆಯನ್ನು ಕಾಡಾನೆ ಹಿಂಡುಗಳು ತುಳಿದು ನಾಶಮಾಡಿವೆ. ಭತ್ತದ ಗದ್ದೆಯಲ್ಲಿ ಬೆಳೆ ಕದಿರು ದಾಟಿದ್ದು ಉತ್ತಮವಾಗಿ ಬೆಳೆದಿರುವ ಫಸಲನ್ನು ಕಾಡಾನೆಗಳು ತುಳಿದು, ತಿಂದು ಅಪಾರ ಪ್ರಮಾಣದಲ್ಲಿ ನಾಶ ಮಾಡಿದ್ದು, ರೈತರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಗ್ರಾಮದ ಪೆಮ್ಮಣಮಾಡ ರಮೇಶ್ ಪ್ರಗತಿ ಪರ ರೈತರಾಗಿದ್ದು, ಹಲವು ಭಾರಿ ಅವರಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಎಂಬ ಪ್ರಶಸ್ತಿ ದೊರಕಿದೆ. ಕೃಷಿ ಇಲಾಖೆಯಿಂದ ರಮೇಶ್ ಅವರಿಗೆ ಭತ್ತ ಬೆಳೆಯಲ್ಲಿ ಅಧಿಕ ಇಳುವರಿ ಪಡೆದ ಹಿನ್ನೆಲೆಯಲ್ಲಿ ಪ್ರಶಸ್ತಿ ಲಭಿಸಿದೆ.
ಕಾಡಾನೆಗಳನ್ನು ಗ್ರಾಮದಿಂದ ಅರಣ್ಯಕ್ಕೆ ಅಟ್ಟಲು ಕೂಡಲೇ ಕಾರ್ಯಾಚರಣೆ ನಡೆಸಬೇಕು ಮತ್ತು ಅರಣ್ಯ ಸರ ಹದ್ದಿನಲ್ಲಿ ರೈತರ ಬೆಳೆÉ ರಕ್ಷಣೆ ಹಾಗೂ ಕಾರ್ಮಿಕರ -ರೈತರ ಪ್ರಾಣ ಹಾನಿ ತಪ್ಪಿಸಲು ವನ್ಯ ಪ್ರಾಣಿ ಗ್ರಾಮಕ್ಕೆ ನುಸುಳುವದನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.