ಮಡಿಕೇರಿ, ನ. 7: ಹುಣಸೂರಿನಲ್ಲಿ ಆಯೋಜಿತ ರೋಟರಿ ವಲಯ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ 6 ಬಹುಮಾನ ಗಳನ್ನು ತನ್ನದಾಗಿಸಿಕೊಂಡಿದೆ.
ಹುಣಸೂರು ಮತ್ತು ಪಿರಿಯಾಪಟ್ಟಣ ರೋಟರಿ ವತಿಯಿಂದ ಆಯೋಜಿತ ಕಲಾಸಂಗಮ ರೋಟರಿ ವಲಯ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ಸ್ಕಿಟ್‍ನಲ್ಲಿ ಪ್ರಥಮ, ಸಮೂಹ ಗಾಯನ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ತೃತೀಯ ಬಹುಮಾನ ಪಡೆದಿದೆ.
ಏಕವ್ಯಕ್ತಿಗಾಯನ ಸ್ಪರ್ಧೆಯಲ್ಲಿ ಡಾ. ಆಶಿಕ್ ಚಂಗಪ್ಪ ದ್ವಿತೀಯ, ಸುಮಿ ಸುಬ್ಬಯ್ಯ ತೃತೀಯ ಮತ್ತುಡ್ಯುಯೆಟ್ ಗಾಯನ ವಿಭಾಗದಲ್ಲಿ ವಿದ್ಯಾ ಹಾಗೂ ನಾರಾಯಣ್ ತೃತೀಯ ಬಹುಮಾನ ಪಡೆದಿದ್ದು, ಒಟ್ಟು 6 ಬಹುಮಾನ ಗಳನ್ನು ಗೋಣಿಕೊಪ್ಪಲು ರೋಟರಿ ಕ್ಲಬ್ ಪಡೆದಿದೆ.
ವಲಯ 6ರ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಬಹುಮಾನ ವಿತರಿಸಿದರು ಎಂದು ರೋಟರಿ ಗೋಣಿಕೊಪ್ಪಲು ಅಧ್ಯಕ್ಷ ನವೀನ್ ಮತ್ತು ಕಾರ್ಯದರ್ಶಿ ಪೂಣಚ್ಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.