ಕೂಡಿಗೆ, ನ. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಈ ವ್ಯಾಪ್ತಿಯ ರೈತರ ಭತ್ತದ ಬೆಳೆ ಮೇಲೆ ಕಾಡಾನೆ ದಾಳಿ ಮಾಡಿ ಭಾರೀ ನಷ್ಟ ಉಂಟು ಮಾಡಿದೆ. ಪ್ರಕಾಶ, ಕಿರಣ, ಚಿಣ್ಣಪ್ಪ, ಅಣ್ಣಯ್ಯ, ಉದಯ ಎಂಬವರ ಗದ್ದೆಗಳಿಗೆ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಹೆಬ್ಬಾಲೆ ವಲಯ ಅರಣ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರÀವಸೆ ನೀಡಿದ್ದಾರೆ.