ಮಡಿಕೇರಿ, ನ. 6: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಮದೆನಾಡಿನ ಮದೆ ಮಹೇಶ್ವರ ಪ.ಪೂ.ಕಾಲೇಜಿನ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡರಾಜ್ಯೋತ್ಸವ ಅಂಗವಾಗಿ ಪ್ರೋತ್ಸಾಹಧನವನ್ನು ನೀಡಲಾಯಿತು.
ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮಾಧ್ಯಮದಲ್ಲಿಯೇ ಸಮಯ ವ್ಯರ್ಥ ಮಾಡದೇ ಶಿಕ್ಷಣವನ್ನೂ ಗಂಭೀರ ವಾಗಿ ಪರಿಗಣಿಸುವಂತೆ ರೋಟರಿ ಜಿಲ್ಲಾ ಮಾಜಿ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಕಿವಿಮಾತು ಹೇಳಿದರು. ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ.ಕಾರ್ಯಪ್ಪ, ನಿರ್ದೇಶಕ ಡಾ.ಜನಾರ್ಧನ್, ಪ. ಪೂ. ಕಾಲೇಜು ಪ್ರಾಂಶುಪಾಲರಾದ ಗುಲಾಬಿ ಜನಾರ್ಧನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣಪತಿ, ಶಿಕ್ಷಕ ವೃಂದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.