ಕೂಡಿಗೆ, ನ. 7 : ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೂಡಿಗೆ ಕ್ರೀಡಾಶಾಲೆಯ ನಿಲಯದ ವಿದ್ಯಾರ್ಥಿನಿ ಸಿ.ಎಂ. ಶೈಲಾ 800 ಮೀಟರ್ ಮತ್ತು ಕೆ.ಡಿ.ಸನ್ನಿಧಿ 2000 ಮೀಟರ್ ಓಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.
ಕ್ರೀಡಾಪಟುಗಳಿಗೆ ಕ್ರೀಡಾಶಾಲೆಯ ಅಥ್ಲೆಟಿಕ್ಸ್ ತರಬೇತುದಾರರಾದ ಅಂತೋಣಿ ಡಿಸೋಜ ಮತ್ತು ಬಿ.ಜಿ. ಮಂಜುನಾಥ್ ಅವರು ತರಬೇತಿ ನೀಡುತ್ತಿದ್ದಾರೆ.