ಕೂಡಿಗೆ, ನ. 7 : ಕುಶಾಲನಗರ ರಾಜ್ಯ ಹೆದ್ದಾರಿ ರಸ್ತೆಯ ಅಪಘಾತ ಸ್ಥಳ ಎಂದು ಗುರುತಿಸಲ್ಪಟಿರುವ ಕೂಡಿಗೆಯಿಂದ ಕುಶಾಲನಗರದವರೆಗಿನ ರಸ್ತೆಯ ಅಭಿವೃದ್ಧಿ ಮತ್ತು ದ್ವಿಪಥ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ಮೂಲಕ ರೂ. 4.50 ಕೋಟಿ ವೆಚ್ಚದಲ್ಲಿ ಕೂಡಿಗೆ-ಕುಶಾಲನಗರ ರಾಜ್ಯ ಹೆದ್ದಾರಿಯ ಕೂಡಿಗೆ ಸರ್ಕಲ್, ಡೈರಿ ಸರ್ಕಲ್‍ನಿಂದ ಕೂಡುಮಂಗಳೂರು ಗ್ರಾ.ಪಂ ವರೆಗೆ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಕೂಡ್ಲೂರಿನ ತಿರುವಿನವರೆಗೆ, ಮುಳ್ಳುಸೋಗೆಯಿಂದ ಕುಶಾಲನಗರದ ಸೋಮೇಶ್ವರ ದೇವಾಲಯದವರೆಗೆ ನಾಲ್ಕು ಸ್ಥಳಗಳಲ್ಲಿಯೂ ರಸ್ತೆಯನ್ನು ಅಗಲೀಕರಿಸಿ, ದ್ವಿಪಥ ರಸ್ತೆ ನಿರ್ಮಾಣಕ್ಕೆ ರಸ್ತೆಯ ಮಧ್ಯೆ ವಿಭಜಕ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.