ಸೋಮವಾರಪೇಟೆ, ನ. 5: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಸಮೀಪ ನೂತನವಾಗಿ ರೂ. 8ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬಾಸ್ಕೆಟ್‍ಬಾಲ್ ಮೈದಾನಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.
ಶಾಸಕರ ನಿಧಿಯಿಂದ ರೂ. 5 ಲಕ್ಷ ಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ 8ಲಕ್ಷ ಅನುದಾನದಲ್ಲಿ ನೂತನವಾಗಿ ಬಾಸ್ಕೆಟ್‍ಬಾಲ್ ಮೈದಾನ ನಿರ್ಮಾಣವಾಗಲಿದೆ. ಈ ಹಿಂದೆ ಇದ್ದ ಬಾಸ್ಕೆಟ್‍ಬಾಲ್ ಮೈದಾನವನ್ನು ಟರ್ಫ್ ನಿರ್ಮಾಣಕ್ಕಾಗಿ ತೆರವು ಗೊಳಿಸಿದ್ದರಿಂದ, ಕ್ರೀಡಾಪಟುಗಳಿಗೆ ಮೈದಾನದ ಕೊರತೆ ಎದುರಾಗಿತ್ತು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ನೂತನವಾಗಿ ಕಾಂಕ್ರಿಟ್ ಆವರಣದ ಮೈದಾನದ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭ ಪ.ಪಂ. ಸದಸ್ಯ ಬಿ.ಆರ್. ಮಹೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಅಶೋಕ್, ಪಕ್ಷದ ಮುಖಂಡರಾದ ಜಗನ್ನಾಥ್, ಚೇತನ್, ಶರತ್‍ಚಂದ್ರ, ಜೀವನ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.