ಗುಡ್ಡೆಹೊಸೂರು, ನ. 8: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬಸವೇಶ್ವರ ದೇವಸ್ಥಾನವನ್ನು ತಾ. 8 ರಂದು (ಇಂದು) ಲೋಕರ್ಪಣೆ ಮಾಡಲಾಗುವದು. ತಾ. 7 ರಂದು ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದ ಸಂಕಲ್ಪ ನವಗ್ರಹ ಪೂಜೆ, ಮೃತ್ಯುಂಜಯ ವಾಸ್ತು ಶಾಂತಿ ಪೂಜೆ, ಕಳಶ ಪೂಜೆ, ವಿವಿಧ ಹೋಮಗಳು ನಡೆದವು. ತಾ. 8ರಂದು (ಇಂದು) ಬಸವೇಶ್ವರ, ಕನ್ನಂಬಾಡಿ ಅಮ್ಮ, ನಾಗದೇವತೆ, ಮಾರಮ್ಮ ದೇವತೆಗಳ ಪ್ರಾಣ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಳಸ ಕುಂಭಾಭಿಷೇಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠ ಶಾಂತಮಲ್ಲಿ ಕಾರ್ಜನ ಸ್ವಾಮಿಗಳ ಮತ್ತು ತೋಂಟದಾರ್ಯ ಮಠದ ಬಸವಲಿಂಗ ಶಿವಯೋಗಿ ಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಕಿರಿಕೊಡ್ಲಿ ಮಠದ ಸದಾಶಿವ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಅಲ್ಲದೆ ವಿವಿಧ ಮಠದ ಸ್ವಾಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಎಸ್. ಪೂರ್ಣಿಮ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.