ಕುಶಾಲನಗರ, ನ. 7: ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಪಲಿಮಾರು ಮಠದಲ್ಲಿ ಅಖಂಡ ಹರಿನಾಮ ಸಂಕೀರ್ತನ ಯಜ್ಞದಲ್ಲಿ ಪಾಲ್ಗೊಂಡ ಕುಶಾಲನಗರ ಮಹಿಳಾ ಭಜನಾ ಮಂಡಳಿ ತಂಡದ ಸದಸ್ಯರಿಗೆ ಅನುಗ್ರಹ ಪತ್ರ ವಿತರಿಸಲಾಯಿತು.
ಇತ್ತೀಚೆಗೆ ಉಡುಪಿಯಲ್ಲಿ ಎರಡು ವರ್ಷಗಳ ಕಾಲ ನಿರಂತರವಾಗಿ ಅಹೋರಾತ್ರಿ ನಡೆಸಿದ ಅಖಂಡ ಹರಿನಾಮ ಸಂಕೀರ್ತನ ಯಜ್ಞದಲ್ಲಿ ಕುಶಾಲನಗರದ ಮಹಿಳಾ ಭಜನಾ ಮಂಡಳಿ ತಂಡ ಎರಡು ದಿನಗಳ ಕಾಲ ಪಾಲ್ಗೊಂಡಿತ್ತು.
ಈ ಸಂದರ್ಭ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರು ತಂಡದ ಸದಸ್ಯರಿಗೆ ಅನುಗ್ರಹ ಪತ್ರ ಪ್ರದಾನ ಮಾಡಿರುವದಾಗಿ ಭಜನಾ ಮಂಡಳಿ ಪ್ರಮುಖರಾದ ರಮಾ ವಿಜಯೇಂದ್ರ ತಿಳಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ 2018 ರಿಂದ 2020ರ ತನಕ ಅಖಂಡ ಹರಿನಾಮ ಸಂಕೀರ್ತನ ಯಜ್ಞ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಶಾಲನಗರ ಮಹಿಳಾ ಭಜನಾ ಮಂಡಳಿಯ 20 ಸದಸ್ಯರು ವಿಶ್ವ ಮಧ್ವ ಮಹಾ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿರುವ ದಾಸರ ಕೀರ್ತನೆಗಳ ಹಾಡು, ರೂಪಕಗಳನ್ನು ಬರವಣಿಗೆ ಮೂಲಕ ಮೂರು ವರ್ಷಗಳ ದಾಸ ಪದವಿ ಪರೀಕ್ಷೆಗೆ ಕೂಡ ತಯಾರಿ ನಡೆಸುತ್ತಿದ್ದಾರೆ.