ಮಡಿಕೇರಿ, ನ. 7: ಕರ್ನಾಟಕ ಸ್ಟೇಟ್ ಮಾಸ್ಟರ್ ಅಥ್ಲೆಟಿಕ್ ಮೀಟ್ ಮಂಗಳೂರಿನ ವಿಶ್ವವಿದ್ಯಾಲಯದ ಮಂಗಳ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಇದರಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮುಲ್ಲೇರ ಪೊನ್ನಮ್ಮ ಪೂವಣ್ಣ 65 ವರ್ಷದೊಳಗಿನ ವಿಭಾಗದಲ್ಲಿ 100 ಮೀಟರ್ ಓಟ, 200 ಮೀಟರ್ ಓಟ, ಶಾಟ್‍ಪುಟ್ ಮತ್ತು ಮಿಕ್ಸಡ್ ರಿಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಇವರ ಪುತ್ರಿ ಕಂಬೀರಂಡ ರಾಖಿ ಪೂವಣ್ಣ 40 ವರ್ಷದೊಳಗಿನ ವಿಭಾಗದ ಟ್ರಿಪಲ್ ಜಂಪ್ ಹಾಗೂ ಮಿಕ್ಸಡ್ ರಿಲೆಯಲ್ಲಿ ಪ್ರಥಮ ಸ್ಥಾನ ಹಾಗೂ ಲಾಂಗ್ ಜಂಪ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 35 ವರ್ಷದೊಳಗಿನ ವಿಭಾಗದಲ್ಲಿ ಬೋಪಂಡ ಕುಸುಮ ಭೀಮಯ್ಯ 800 ಮೀಟರ್ ಓಟ, ಶಾಟ್‍ಪುಟ್, ಮಿಕ್ಸಡ್ ರಿಲೆಯಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. 2020ರ ಫೆಬ್ರವರಿ ಯಲ್ಲಿ ಗುಜರಾತಿನ ವಡೋದರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಈ ಮೂವರು ಆಯ್ಕೆ ಆಗಿದ್ದಾರೆ.