ಮಡಿಕೇರಿ, ನ. 7: ಬೆಟ್ಟತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಪಿಕಪ್ ವಾಹನದಲ್ಲಿ (ಕೆ.ಎ. 12 ಬಿ.5333) ಕೆಂಪು ನಂದಿ ಹಾಗೂ ಹಲಸು ಜಾತಿಯ ಮರಗಳ ಸೈಜುಗಳನ್ನು ತುಂಬಿಸಿ ಮನೆಯ ಬಳಿ ಇಟ್ಟಿರುವದನ್ನು ಪತ್ತೆಹಚ್ಚಿ ಕೆ.ಕೆ. ಹೇಮರಾಜ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಪಿಕಪ್ ಸಮೇತ ಅದರಲ್ಲಿದ್ದ ಅಂದಾಜು ರೂ. 1,50,000 ಮೌಲ್ಯದ ಮರವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ ಡಿಯೋಬ ಅವರುಗಳ ಮಾರ್ಗದರ್ಶನದಲ್ಲಿ ಮಡಿಕೇರಿ ವಲಯ ಅರಣ್ಯ ಅಧಿಕಾರಿ ವೈ.ಕೆ. ಜಗದೀಶ್ ನೇತೃತ್ವದಲ್ಲಿ ಮಡಿಕೇರಿ ಉಪವಲಯದ ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್, ಅರಣ್ಯ ರಕ್ಷಕರಾದ ಯು.ಆರ್. ಸಂದೇಶ್, ಯು.ಸಿ. ವಾಸುದೇವ, ಸಿಬ್ಬಂದಿಗಳಾದ ಶ್ಯಾಮ್‍ಸುಂದರ್, ಬಿ.ಎಂ. ಮಂದಪ್ಪ, ಕುಶಾ ಬಿದ್ರುಪಣೆ, ಶರತ್, ವಿಕ್ಕಿನ್ ಭಾಗವಹಿಸಿದ್ದರು.