ವೀರಾಜಪೇಟೆ. ನ. 7: ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ತರಬೇತಿ ನೀಡುವ ಸರಕಾರಿ ಕಾರ್ಯಕ್ರಮವಾದ ‘ವಿಶ್ವಾಸ ಕಿರಣ’ವನ್ನು ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕರುಗಳಾದ ವಿನೋದ್ಕುಮಾರ್ ಹಾಗೂ ನಳಂದ ಪಾಲ್ಗೊಂಡಿದ್ದರು.
 
						