ನಾಪೋಕ್ಲು, ನ.7: ಸಮೀಪದ ಬೇತು ಗ್ರಾಮದ ಹಿಂದೂ ರುದ್ರಭೂಮಿಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ತಹಶೀಲ್ದಾರ್ ಮಹೇಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಭೇಟಿ ನೀಡಿ ಪರಿಶೀಲಿಸಿ ದರು. ರುದ್ರಭೂಮಿಯಲ್ಲಿ ತೆಗೆಯಲಾಗಿದ್ದ ಗುಂಡಿಯನ್ನು ಮುಚ್ಚುವ ಕಾರ್ಯ ಗುರುವಾರ ಭರದಿಂದ ಸಾಗಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತ ದೇಹಗಳ ಅವಶೇಷಗಳು ದೊರೆತವು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವರ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಸದ್ಯದಲ್ಲಿಯೇ ವರದಿ ಸಲ್ಲಿಸಲಾಗುವದು ಎಂದರು. ತಹಶೀಲ್ದಾರ್ ಮಹೇಶ್ ಮಾತನಾಡಿ ರುದ್ರಭೂಮಿಯಲ್ಲಿ ಕಸವಿಲೇವಾರಿ ಗೆಂದು ಗುಂಡಿ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಭಜರಂಗ ದಳದ ಅಧÀ್ಯಕ್ಷ ಬಿ.ಎಂ. ಪ್ರತೀಪ್ ಪ್ರತಿಕ್ರಿಯಿಸಿ ಹಿಂದೂ ರುದ್ರಭೂಮಿಯಲ್ಲಿ ಅತಿಕ್ರಮಣ ಮಾಡಿ ಗುಂಡಿ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರತಿಭಟನೆ ನಡೆಸಿ ಮೊಕದ್ದಮೆ ದಾಖಲಿಸಿದ್ದೆವು. ಇಂದು ಗುಂಡಿ ಮುಚ್ಚುವ ಸಂದರ್ಭ ಅಸ್ಥಿಪಂಜರಗಳು ಲಭಿಸಿದ್ದು ನಮ್ಮ ಆರೋಪಕ್ಕೆ ಪುರಾವೆ ದೊರೆತಂತಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ ಸಿಬ್ಬಂದಿಗಳು, ಪಿಡಿಒ ಚೋಂದಕ್ಕಿ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಹಿಂದೂಪರ ಸಂಘಟನೆಯ ವಿನಯ್ ಇದ್ದರು.ಕಾರ್ಯಾಚರಣೆ ತಡರಾತ್ರಿಯವರೆಗೆ ನಡೆಯಿತು.
ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಸರ್ವೆ ನಂ. 37/2ರ ನಾಪೆÇೀಕ್ಲು ಹೋಬಳಿಗೆ ಒಳಪಟ್ಟ ಹಿಂದೂ ರುದ್ರಭೂಮಿಗೆ ಸೇರಿದ ಜಾಗದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ 100 ಅಡಿ ಉದ್ದ, 25 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ನಿರ್ಮಿಸಿತ್ತು. ಅದರಂತೆ ಕೆಲವು ದಿನಗಳಿಂದ ಅಲ್ಲಿ ತ್ಯಾಜ್ಯವನ್ನು ಹಾಕುತ್ತಿದ್ದುದು ಬೆಳಕಿಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ನಂತರ ಸ್ಥಳೀಯ ನಾಡು ಕಚೇರಿ ಮತ್ತು ಗ್ರಾ.ಪಂ. ಕಚೇರಿ ಬಳಿ ತೆರಳಿ ಗ್ರಾ.ಪಂ. ಆಡಳಿತ ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. -ದುಗ್ಗಳ ಸದಾನಂದ