ಮಡಿಕೇರಿ, ನ. 6: ಪ್ರಕೃತಿ ವಿಕೋಪದಿಂದ ಸಂಕಷ್ಟ ಎದುರಿಸಿದ ಕೊಡಗಿನ 14 ಸಾವಿರ ಕೃಷಿಕರಿಗೆ ಈಗಾಗಲೇ ರೂ. 57 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಮತ್ತಷ್ಟು ಬೆಳೆಗಾರರಿಗೆ ಮುಂದಿನ ಕೆಲವೇ ದಿನಗಳಲ್ಲಿ ಆರ್ಥಿಕ ಪರಿಹಾರ ದೊರಕಲಿದೆ ಎಂದು ಜಿಲ್ಲಾಧಿಕಾರಿ ಮಡಿಕೇರಿ, ನ. 6: ಪ್ರಕೃತಿ ವಿಕೋಪದಿಂದ ಸಂಕಷ್ಟ ಎದುರಿಸಿದ ಕೊಡಗಿನ 14 ಸಾವಿರ ಕೃಷಿಕರಿಗೆ ಈಗಾಗಲೇ ರೂ. 57 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಮತ್ತಷ್ಟು ಬೆಳೆಗಾರರಿಗೆ ಮುಂದಿನ ಕೆಲವೇ ದಿನಗಳಲ್ಲಿ ಆರ್ಥಿಕ ಪರಿಹಾರ ದೊರಕಲಿದೆ ಎಂದು ಜಿಲ್ಲಾಧಿಕಾರಿ ನಿರ್ಮಾಣದ ಧ್ಯೇಯದೊಂದಿಗೆ ಸ್ಥಿತಿ ಸ್ಥಾಪಕ ಸಮುದಾಯವನ್ನು ನಿರ್ಮಿಸಲು ಕೊಡಗು ಜಿಲ್ಲಾಡಳಿತ ದಿಂದ ಆಯೋಜಿತ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.2018ರಲ್ಲಿ 263 ಮನೆಗಳು ಪೂರ್ಣ ಹಾನಿಗೀಡಾಗಿದ್ದು 2019ರಲ್ಲಿ 385 ಮನೆಗಳು ಪೂರ್ಣ ಹಾನಿಗೊಳ ಗಾಗಿದೆ. ಜಿಲ್ಲೆಯಲ್ಲಿ 2019ರಲ್ಲಿ 119 ಗ್ರಾಮಗಳು

ಹಾನಿಗೊಳಗಾಗಿದ್ದು ರೂ. 1700 ಕೋಟಿ ಮೂಲಸೌಕರ್ಯ ನಷ್ಟವಾಗಿದೆ. 2 ವರ್ಷಗಳಲ್ಲಿ

ರೂ. 500 ಕೋಟಿ

(ಮೊದಲ ಪುಟದಿಂದ) ಕೃಷಿ ಜಮೀನು ಹಾನಿ ಗೊಳಗಾಗಿದೆ. 2596 ಕುಟುಂಬಗಳು ವಿಕೋಪ ಸಂದರ್ಭ ಸ್ಥಳಾಂತರ ಗೊಂಡಿದ್ದು, 8200 ಮಂದಿ ಜಿಲ್ಲೆಯಾ ದ್ಯಂತ 50 ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರು. 79 ಆರೋಗ್ಯ ಕೇಂದ್ರಗಳ ಕಟ್ಟಡಗಳೂ ಹಾನಿಗೊಳಗಾಗಿದ್ದು, ಶಾಲೆ, ಅಂಗನವಾಡಿ ಕಟ್ಟಡಗಳೂ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಅಂಕಿಅಂಶ ಒದಗಿಸಿದರು.

ಮಳೆಯಿಂದಾಗಿ ತೋಟದ ಮರಗಳು ಹೊಳೆಯಲ್ಲಿ ತೇಲಿ ಬಂದಿದ್ದರೂ, ಅರಣ್ಯ ಇಲಾಖೆ ಇನ್ನೂ ಮರಗಳನ್ನು ತೆರವುಗೊಳಿಸಿಲ್ಲ. ಮರಗಳ ಮಾಲೀಕರಿಗೆ ಮರಗಳನ್ನು ನೀಡಲೂ ಇಲ್ಲ ಎಂದು ದೂರಿದ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ. ದೇವಯ್ಯ, ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು ಸೂಕ್ತ ಜಾಗ ನೀಡಬೇಕೆಂದು ಮನವಿ ಮಾಡಿದರು.

ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ತೋಡುಗಳಲ್ಲಿ ಹೂಳು ತುಂಬಿ ಕೊಂಡಿದ್ದು ನೀರಿನ ಸರಾಗ ಹರಿಯುವಿಕೆಗೆ ತೊಡಕಾಗಿದೆ. ಮನೆಗಳನ್ನು ಭಾಗಶಃ ಕಳೆದುಕೊಂಡವರಿಗೆ ಇನ್ನೂ ಸೂಕ್ತ ಮನೆ ದೊರಕಿಲ್ಲ. ಮಳೆಗಾಲದ ಮೂರು ತಿಂಗಳು ಪಟ್ಟಣಗಳಿಗೆ ಬಂದು ಆಶ್ರಯ ಪಡೆದು ಮತ್ತೆ ಹಾನಿಗೀಡಾದ ಮನೆಗಳಲ್ಲಿಯೇ ಅನೇಕ ಗ್ರಾಮೀಣ ಜನ ನೆಲಸುವಂತಾಗಿದೆ. ಸಮಸ್ಯೆ ಪರಿಹರಿಸಿ ಎಂದು ಕೋರಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಒತ್ತುವರಿ ಮಾಡಿ ಕೊಂಡವರಿಗೆ ಇನ್ನೂ ಸೂಕ್ತ ನಿವೇಶನ ದೊರಕಿಲ್ಲ. ಖಾಸಗಿ ಜಾಗವನ್ನು ಸರ್ಕಾರವೇ ಖರೀದಿಸಿ ನೀಡು ವಂತಾಗಬೇಕು. ನದಿ-ಬೆಟ್ಟ ವ್ಯಾಪ್ತಿಯಲ್ಲಿನ ಅಪಾಯಕಾರಿ ಜಾಗದಲ್ಲಿರುವವರನ್ನು ಸ್ಥಳಾಂತರ ಗೊಳಿಸಬೇಕೆಂದು ಸಲಹೆ ನೀಡಿದರು.

ಕಾವೇರಿ ನದಿಯಲ್ಲಿರುವ ಹೂಳಿನೊಂದಿಗೆ ನದಿಯಲ್ಲಿರುವ ಮರಳನ್ನೂ ತೆಗೆಯಬೇಕೆಂದು ಭರತ್ ಒತ್ತಾಯಿಸಿದರು.

ಕೊಡಗು ಸೇವಾ ಕೇಂದ್ರದ ಸಂಚಾಲಕ ಪ್ರಮೋದ್ ಸೋಮಯ್ಯ ಮಾತನಾಡಿ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಿಸುವಾಗ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸದೇ ಇರುವದರಿಂದಲೇ ಮಳೆಗಾಲದಲ್ಲಿ ಬಹುತೇಕ ಅನಾಹುತಗಳು ಸಂಭವಿಸುತ್ತಿವೆ. ಚರಂಡಿ ಮುಚ್ಚಲ್ಪಟ್ಟು ನೀರು ಹರಿಯಲಾಗದ ಸ್ಥಿತಿಯಿದೆ. ಇಲಾಖೆಯಲ್ಲಿ ಮೊದಲಿದ್ದಂತೆ ಗ್ಯಾಂಗ್ ಮೆನ್‍ಗಳು ಈಗಿಲ್ಲದಿರುವದು ಸಮಸ್ಯೆಗೆ ಮತ್ತೊಂದು ಕಾರಣ ಎಂದು ಅನಿಸಿಕೆ ವ್ಯಕ್ತಪಡಿಸಿದರಲ್ಲದೇ, ಜೆಸಿಬಿ, ಹಿಟಾಚಿ ಯಂತ್ರಗಳನ್ನು ರಸ್ತೆ ನಿರ್ಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವದರಿಂದಲೇ ಬರೆ ಕುಸಿತವಾಗುತ್ತಿದೆ ಎಂದು ಹೇಳಿದರು.

ಇನ್ಫೋಸಿಸ್ ಫೌಂಡೇಷನ್ ಭರವಸೆ ನೀಡಿದ್ದ ರೂ. 25 ಕೋಟಿ ಸಹಾಯಧನ ಇನ್ನೂ ಬಾರದಿರಲು ಕಾರಣವೇನು ಎಂದು ಪ್ರಶ್ನಿಸಿದ ಪ್ರಮೋದ್, ಇದೇ ಸಂಸ್ಥೆಯ ವತಿಯಿಂದ 80 ಮನೆ ನಿರ್ಮಾಣಕ್ಕೂ ವಿಳಂಭವಾಗುತ್ತಿರಲು ಕಾರಣವೇನು ಎಂದು ಕೇಳಿದರು. ಕೊಡಗಿನ ಸಂತ್ರಸ್ತರ ನೆರವಿಗೆ ಸಾಕಷ್ಟು ದಾನಿಗಳು ಮುಂದೆ ಬಂದಿದ್ದರೂ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ನಿರೀಕ್ಷಿತ ರೀತಿಯಲ್ಲಿ ದಾನಿಗಳು ನೆರವಿಗೆ ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕಂದಾಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರು ಹೇಳಿಕೊಂಡ ಪ್ರಮೋದ್ ಸೋಮಯ್ಯ, ಕಂದಾಯ ಜಮೀನಿಗೆ ಕಂದಾಯ ದರ ನಿಗದಿಪಡಿಸಲು ಸಮಸ್ಯೆ ಏನಿದೆ. ಕೊಡಗಿನವರೇನು ಪಾಕಿಸ್ತಾನ, ಅಫಘಾನಿಸ್ತಾನದಿಂದ ಬಂದವರೇ? ಕೊಡಗಿನವರಿಗೆ ಅವರ ಹಕ್ಕು ನೀಡಲು ತಾರತಮ್ಯವೇಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ಮುರಳಿ ಮಾತನಾಡಿ, ಆರೋಗ್ಯ ಕಾರ್ಯಕರ್ತೆ ಯರಿಗೆ ರೆಡ್ ಕ್ರಾಸ್‍ನಿಂದ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರಲ್ಲದೇ ಮಡಿಕೇರಿ ಯಲ್ಲಿ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲೇಬೇಕು. ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆ ಎದುರಾದೀತು ಎಂದು ಎಚ್ಚರಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ. ವಿಶ್ವನಾಥ್ ಮಾತನಾಡಿ, ಕೆಲವು ಸಂಸ್ಥೆಗಳು ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಂದಿವೆ. ಬೆಳೆಗಾರರ ಒಕ್ಕೂಟದಿಂದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಕೊಡಗಿನ ಪ್ರಕೃತಿ ವಿಕೋಪದಿಂದಾಗಿ ಬೆಳೆಗಾರರು, ಕೃಷಿ ಜಮೀನಿಗೆ ಉಂಟಾಗಿರುವ ಸಂಕಷ್ಟದ ಬಗ್ಗೆ ಮನವಿ ಮೂಲಕ ಮನವರಿಕೆ ಮಾಡಲಾಗಿದೆ. ಹೀಗಿದ್ದರೂ ನಿರೀಕ್ಷಿತ ಸ್ಪಂದನ ದೊರಕದಾಗಿದ್ದು ಹತಾಶ ರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾಡಳಿತದಿಂದ ಕೆಲವೊಂದು ಮಾಹಿತಿಗಳು ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ತಲಪುತಿಲ್ಲ ಎಂಬ ಅಂಶವನ್ನೂ ವಿಶ್ವನಾಥ್ ಹೇಳಿದರು. ಕೇಂದ್ರ ಸರ್ಕಾರ ಈ ಮೊದಲು ಹೇಳಿದಂತೆ ಪ್ರಕೃತಿ ವಿಕೋಪದ ಸಮೀಕ್ಷೆಗೆ ಪರಿಣಿತರ ತಂಡವನ್ನೂ ಕಳುಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಕೃಷಿ ಭೂಮಿ ಕಳೆದುಕೊಂಡವರಿಗೆ ರೂ. 300 ಕೋಟಿ ಪರಿಹಾರ ಅಗತ್ಯವಿದ್ದು ಇದನ್ನು ನೀಡುವದು ಸರ್ಕಾರಕ್ಕೆ ದೊಡ್ಡ ಹೊರೆಯೇನಲ್ಲ ಎಂದು ಅಭಿಪ್ರಾಯಪಟ್ಟರು.

ಹಿಡುವಳಿ ಜಾಸ್ತಿಯಿದೆ. ಜೇಬಿನಲ್ಲಿ ದುಡ್ಡಿಲ್ಲ ಎಂಬ ಸಂಕಷ್ಟ ಸ್ಥಿತಿಯಲ್ಲಿ ಕಾಫಿ ಕೃಷಿಕರಿದ್ದಾರೆ ಎಂದು ಹೇಳಿದ ಕೆ.ಕೆ. ವಿಶ್ವನಾಥ್, ಕಳೆದ ವರ್ಷ ಹೆಕ್ಟೇರ್‍ಗೆ ರೂ. 36 ಸಾವಿರ ದೊರಕಿದ್ದರೆ ಈ ಬಾರಿ ಫಸಲು ನಾಶಕ್ಕೆ ಹೆಕ್ಟೇರ್‍ಗೆ ರೂ. 56 ಸಾವಿರ ದೊರಕಿರುವದು ಒಂದಷ್ಟು ಸಮಾಧಾನ ತಂದಿದೆ ಎಂದು ಹೇಳಿದರು.

ಪರಿಸರ ಪ್ರೇಮಿ ಶರಿ ಸುಬ್ಬಯ್ಯ ಮಾತನಾಡಿ, ಕೊಡಗು ಜಿಲ್ಲೆಗೆ ಸೂಕ್ತವಾದ ಪರಿಸರ ನೀತಿಯ ಅತ್ಯಗತ್ಯವಿದೆ. ಜನರ ಹಿತರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟುವಾದ, ದೃಢ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಮಕ್ಕಂದೂರು ಗ್ರಾಮಸ್ಥ ನಾಪಂಡ ರವಿಕಾಳಪ್ಪ ಮಾತನಾಡಿ, ತಾನು ಕಳೆದು ವರ್ಷ ಭೂಕುಸಿತ ಸಂಭವಿಸಿದಾಗ 21 ಎಕರೆ ಕೃಷಿ ಭೂಮಿ ಕಳೆದುಕೊಂಡ ನತದೃಷ್ಟನಾಗಿದ್ದು, ಇಂತಹ ನೋವಿನ ನಡುವೆಯೂ ಉಳಿದ ಸಂತ್ರಸ್ತರಿಗೆ ಕೈಲಾದ ನೆರವು ನೀಡಿದ್ದಾಗಿ ಹೇಳಿದರಲ್ಲದೇ, ಕಳೆದ ವರ್ಷ ಅತ್ಯಧಿಕ ಮರಗಳು, ಏಲಕ್ಕಿ ತೋಟವಿದ್ದ ಜಾಗದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಹೀಗಿದ್ದರೂ ರೆಸಾರ್ಟ್ ನಿರ್ಮಾಣ, ರಸ್ತೆ ನಿರ್ಮಾಣದಿಂದಾಗಿ ವಿಕೋಪ ಉಂಟಾಯಿತು ಎಂಬ ಕೆಲವರ ಆರೋಪದಲ್ಲಿ ಯಾವದೇ ಹುರುಳಿಲ್ಲ ಎಂದು ವಿಶ್ಲೇಷಿಸಿದರು. ಕಳೆದ ವರ್ಷದ ಭೂಕುಸಿತಕ್ಕೆ ಮೂಲಕಾರಣ ವಾದ ಹಾರಂಗಿ ಹಿನ್ನೀರು ದುರಂತದ ಬಗ್ಗೆ ಯಾರೂ ಗಂಭೀರ ಗಮನ ನೀಡಿಲ್ಲ ಎಂದು ರವಿಕಾಳಪ್ಪ ದೂರಿದರು.

ಸೋಮವಾರಪೇಟೆಯ ಅಬ್ದುಲ್ ಅಜೀಜ್, ಸ್ವಂತ ಮನೆ ನಿರ್ಮಿಸಿ ದವರಿಗೆ ಸರ್ಕಾರ ಭರವಸೆ ನೀಡಿದ್ದ ಹಣ ಸಿಕ್ಕಿಲ್ಲ. ಮನೆ ನಿರ್ಮಾಣ ಮಾಡಿದವರಿಗೆ ಸಂಬಂಧಿಸಿದ ಇಲಾಖೆಯಿಂದ ಸೂಕ್ತ ಸ್ಪಂದನ ಸಿಕ್ಕಿಲ್ಲ ಎಂದು ವಿಷಾಧಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಬಾಡಿಗೆ ಮನೆಯಲ್ಲಿ ನೆಲೆಸಿರುವವರಿಗೆ ಕೆಲವು ತಿಂಗಳಿನಿಂದ ಬಾಡಿಗೆ ಸಿಕ್ಕಿಲ್ಲ. ಮನೆಯನ್ನು ಸ್ವಂತ ಜಮೀನಿನಲ್ಲಿ ನಿರ್ಮಾಣ ಮಾಡಿದವರಿಗೂ ಬಹುಪಾಲು ಹಣ ಇನ್ನೂ ದೊರಕಿಲ್ಲ. ಮನೆ ನಿರ್ಮಿಸಲು ಸರ್ಕಾರದಿಂದ ನಿವೇಶನ ದೊರಕುತ್ತಿಲ್ಲ. ಇದೆಲ್ಲಾ ಜಿಲ್ಲಾಡಳಿತದಿಂದ ತುರ್ತಾಗಿ ಆಗಬಹುದಾದ ಕೆಲಸಗಳು. ಹೀಗಿದ್ದರೂ ಆಡಳಿತ ವ್ಯವಸ್ಥೆ ವಿಳಂಭ ದೋರಣೆ ತಳೆದಿರುವದು ಸಮರ್ಥ ನೀಯವಲ್ಲ ಎಂದರು. ವಿಕೋಪ ಕ್ಕೀಡಾದ ಗ್ರಾಮಗಳ ಕಂದಾಯ ಕಚೇರಿಗಳಿಗೆ ಜಿಲ್ಲಾಧಿಕಾರಿ ಖುದ್ದಾಗಿ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲಿಸು ವಂತೆಯೂ ರವಿಕುಶಾಲಪ್ಪ ಮನವಿ ಮಾಡಿದರು. ಸಾಲ ಕಟ್ಟಲಾಗದೇ ಬಡ ರೈತರ ಮಹಿಳೆಯರ ತಾಳಿ, ಆಭರಣಗಳು ಬ್ಯಾಂಕಿನಲ್ಲಿಯೇ ಇರುವಂತಾಗಿದೆ. ಇದೆಂತಹ ಸ್ಥಿತಿ ಕೊಡಗಿನವರಿಗೆ ಬಂದಿದೆ ಎಂದು ರವಿಕುಶಾಲಪ್ಪ ಬೇಸರ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಕಾನೂನನ್ನೇ ಮುಂದೆ ಮಾಡಿದ್ದೇ ಆದಲ್ಲಿ ಜೀವನ ಮಾಡೋದು ಹೇಗೆ ಎಂದು ರವಿಕುಶಾಲಪ್ಪ ಪ್ರಶ್ನಿಸಿದರು.

ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ವಿಕೋಪ ಸಂದರ್ಭ ತಾವು ಸರ್ಕಾರಕ್ಕೆ ಯಾವ ರೀತಿ ಸಹಕಾರ ನೀಡಬಲ್ಲೆವು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಇನ್ಫೋಸೀಸ್ ಸಂಸ್ಥೆಯಿಂದ ಈಗಾಗಲೇ 200 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಟಾಟಾ ಸಂಸ್ಥೆಯಿಂದ ಅಂಗನವಾಡಿ ನಿರ್ಮಿಸಲಾಗಿದೆ. ಹಲವು ಸಂಸ್ಥೆಗಳು ಶಾಲೆ, ಅಂಗನವಾಡಿ ನಿರ್ಮಾಣಕ್ಕೆ ಮುಂದೆ ಬಂದಿದೆ ಎಂದು ಮಾಹಿತಿ ನೀಡಿದರಲ್ಲದೇ, ವಿಕೋಪದಿಂದಾಗಿ ಕೊಡಗಿನ ಪ್ರವಾಸೋದ್ಯಮಕ್ಕೂ ಧಕ್ಕೆ ಉಂಟಾಗಿದೆ. ಎಷ್ಟು ನಷ್ಟ ಸಂಭವಿಸಿದೆ ಎಂಬ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹ ನಡೆದಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕ ವಾದ ಅಧ್ಯಯನ ನಡೆಯಬೇಕಾಗಿದೆ ಎಂದರು.

ಪುಟ್ಟ ಮಕ್ಕಳಿಂದ ದೊಡ್ಡವರಿಗೂ ಪ್ರಾಕೃತಿಕ ವಿಕೋಪದ ಬಗ್ಗೆ ಸೂಕ್ತ ಅರಿವುಂಟುಮಾಡಿ ವಿಕೋಪಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತೆಯ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು. ತ್ಯಾಜ್ಯ ವಿಲೇವಾರಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಲಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಜನತೆ ಹಾಗೂ ಸರ್ಕಾರೇತರ ಸಂಸ್ಥೆಗಳೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಸರ್ಕಾರೇತರ ಸಂಘಸಂಸ್ಥೆಗಳು ಸೂಕ್ತ ರೀತಿಯಲ್ಲಿ ಯೋಜನಾ ವರದಿಯನ್ನು ಜಿಲ್ಲಾಡಳಿತಕ್ಕೆ ಸಕಾಲದಲ್ಲಿ ನೀಡಿದ್ದೇ ಆದಲ್ಲಿ ಸರ್ಕಾರ ಕೂಡ ಸಂಸ್ಥೆಗಳೊಂದಿಗೆ ಸಂತ್ರಸ್ತರ ನೆರವಿಗೆ ಸೂಕ್ತ ರೀತಿಯಲ್ಲಿ ವಿಳಂಭರಹಿತವಾಗಿ ಸ್ಪಂದಿಸಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದರು.

ಎರಡು ವರ್ಷಗಳ ಪ್ರಕೃತಿ ವಿಕೋಪದ ಸಂದರ್ಭ ಜನಪ್ರತಿನಿಧಿ ಗಳು, ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು ಜಿಲ್ಲಾಡಳಿತದೊಂದಿಗೆ ಸೂಕ್ತ ಸಹಕಾರ ನೀಡಿದ್ದಾಗಿಯೂ ಜಿಲ್ಲಾಧಿಕಾರಿ ಶ್ಲಾಘಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್, ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.