ಮಡಿಕೇರಿ, ನ. 6: ಪ್ರವಾಸಿ ತಾಣ ಮಾಂದಲ್ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಜೀಪುಗಳಿಗೆ ಸದ್ಯಕ್ಕೆ ಮಾನವೀಯ ದೃಷ್ಟಿಯಿಂದ ಕೆಲವೊಂದು ಷರತ್ತುಗಳೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜೀಪು ನಿಲುಗಡೆಗೆ ಸ್ಥಳ ಹಾಗೂ ಬಾಡಿಗೆ ನಿಗದಿ ಮಾಡಿರುವ ಜಿಲ್ಲಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದಲ್ಲಿ ಸಂಚಾರ ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ. ಮಾಂದಲ್ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪು ಚಾಲಕರುಗಳ ನಡುವಿನ ಪೈಪೋಟಿಯಿಂದಾಗಿ ಮೊನ್ನೆ ದಿನ ಸಂಭವಿಸಿದ ಅವಘಡದಿಂದಾಗಿ ಜಿಲ್ಲಾಧಿಕಾರಿಗಳು ಇಂದು ಜೀಪು ಚಾಲಕರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿ ಜೀಪು ಚಾಲಕರು ವೇಗವಾಗಿ ಹೋಗುತ್ತಿರುವದನ್ನು ಒಪ್ಪಿಕೊಂಡರಲ್ಲದೆ, ತಿಂಗಳಿಗೊಮ್ಮೆ ಸಭೆ ನಡೆಸಿ ಸ್ಥಳೀಯರು ಮಾತ್ರ ಜೀಪು ಚಲಾಯಿಸಬೇಕು, ಚಾಲಕರುಗಳನ್ನಿಟ್ಟುಕೊಳ್ಳಬಾರದೆಂದು ತೀರ್ಮಾನಿಸಿರುತ್ತೇವೆ.
(ಮೊದಲ ಪುಟದಿಂದ) ಆದರೂ ಕೆಲವರು ಚಾಲಿಸುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಗ್ರಾಮಸ್ಥರು ಪ್ರತಿಕ್ರಿಯಿಸಿ; ನಿಮಗಳ ಸಮಸ್ಯೆ ನೀವುಗಳೇ ಪರಿಹರಿಸಿ ಕೊಳ್ಳಬೇಕು, ಗ್ರಾಮದ ರಸ್ತೆಯಲ್ಲಿ ವೇಗಕ್ಕೆ ಕಡಿವಾಣ ಹಾಕಬೇಕು, ರಸ್ತೆ ಸರಿಮಾಡಿಕೊಡಬೇಕು, ಸಮಸ್ಯೆಗೆ ಶಾಶ್ವತ ಪರಿಹಾರಬೇಕೆಂದು ಒತ್ತಾಯಿಸಿದರು.
ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಮಾನವೀಯ ನೆಲೆಯಲ್ಲಿ ಇದೊಂದು ಬಾರಿ ಜೀಪು ಚಲಾಯಿಸಲು ಅವಕಾಶ ನೀಡಲಾಗು ವದು. ಆದರೆ, ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ, ಅನುಮತಿ ನೀಡುವ ಹಳದಿ ಬಣ್ಣ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶವಿದೆ. ಬಿಳಿ ಬಣ್ಣದ ಫಲಕದ ವಾಹನಗಳಿಗೆ ಅವಕಾಶವಿಲ್ಲ, ಬಾಡಿಗೆ ಮಾಡುವ ಜೀಪುಗಳು ನಗರದ ಜೀಪು ನಿಲ್ದಾಣದಿಂದಲೇ ಹೊರಡಬೇಕು, ಈ ಹಿಂದಿನ ಮಾರ್ಗ ಸೂಚಿಯಂತೆ ರಾಜಾಸೀಟ್ ಮಾರ್ಗವಾಗಿ ಇತರರಿಗೆ ತೊಂದರೆ ಯಾಗದಂತೆ ಸಾಗಬೇಕು, ಎ.ವಿ. ಶಾಲೆ ಬಳಿಯಿಂದ ನಂದಿಮೊಟ್ಟೆ ಸೇರಿ ದಂತೆ ಮಾಂದಲ್ಪಟ್ಟಿ ಗೇಟ್ವರೆಗೆ ಎಲ್ಲಿಯೂ ಜೀಪು ಗಳನ್ನು ನಿಲುಗಡೆ ಗೊಳಿಸಬಾರದು, ರಸ್ತೆಯುದ್ದಕ್ಕೂ 30 ರಿಂದ 40 ಕಿ.ಮೀ. ವೇಗದಲ್ಲಿಯೇ ಚಲಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದರು. ವೇಗವಾಗಿ ಚಲಿಸುವ ಬಗ್ಗೆ ಅಥವಾ ಅವಘಡವಾದಲ್ಲಿ ಗಮನ ವಿರಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಗ್ರಾಮಾಂತರ ಪೊಲೀಸರು, ಸಂಚಾರಿ ಪೊಲೀಸ ರನ್ನು ನಿಯೋಜಿಸ ಲಾಗುವದು. ಅಲ್ಲದೆ, ಗ್ರಾಮಸ್ಥರಿಂದ ದೂರು ಬಂದರೂ ಸಂಚಾರ ರದ್ದುಪಡಿಸ ಲಾಗುವದು. ಈ ಸಂಬಂಧ ಪ್ರತಿ ತಿಂಗಳು ಸಭೆ ನಡೆಸುವದಾಗಿ ಹೇಳಿದರು.
ಬಾಡಿಗೆ ನಿಗದಿ
ಮಡಿಕೇರಿ ಜೀಪು ನಿಲ್ದಾಣ ದಿಂದ ಹೊರಡುವ ಜೀಪುಗಳಿಗೆ ಈ ಹಿಂದಿನ ನಿರ್ಣಯದಂತೆ ರೂ.1,100 ಹಾಗೂ ಮಾಂದಲ್ ಪಟ್ಟಿ ಗೇಟ್ ಬಳಿಯಿಂದ ಒಳಗಡೆ ಕರೆ ದೊಯ್ಯಲು ರೂ. 300 ಮಾತ್ರ ಬಾಡಿಗೆ ವಸೂಲಿ ಮಾಡಬೇಕು. ಈ ಬಗ್ಗೆ ನಿಗದಿತ ಸ್ಥಳಗಳಲ್ಲಿ ಫಲಕ ಅಳವಡಿಸುವಂತೆ ಕೆ. ನಿಡುಗಣೆ ಗ್ರಾ.ಪಂ.ಗೆ ಸೂಚಿಸಿದರು. ಬಾಡಿಗೆ ಫಲಕಕ್ಕೆ ಹಾನಿಯುಂಟು ಮಾಡಿದರೆ, ಜೀಪು ಚಾಲಕರನ್ನೇ ಹೊಣೆಗಾರ ರನ್ನಾಗಿ ಮಾಡುವ ದಾಗಿ ಎಚ್ಚರಿಸಿ ದರು. ಮಾಂದಲ್ ಪಟ್ಟಿವರೆಗೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಇಲಾಖೆಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಆರ್ಟಿಓ ಇಲಾಖಾಧಿಕಾರಿ ಗಳು ಇದ್ದರು. - ಸಂತೋಷ್