ವೀರಾಜಪೇಟೆ. ನ. 7: ಬಿಳಿಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಮುಸ್ತಫಾ , ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಗ್ರಾ.ಪಂ. ಅಧ್ಯಕ್ಷೆ ಹಲೀಮಾ, ಗ್ರಾ.ಪಂ. ಸದಸ್ಯ ಎಂ.ಕೆ.ಹನೀಫಾ, ಚಿಲ್ಲವಂಡ ಕಾವೇರಪ್ಪ, ಐನಂಡ ಪ್ರತಾಪ್, ಐನಂಡ ಗಣಪತಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಆಶಾ ಕಾರ್ಯಕರ್ತೆ ದೇವಕಿ ಹಾಜರಿದ್ದರು. ಮುಖ್ಯ ಶಿಕ್ಷಕಿ ಕೆ.ಆರ್. ಬಿಂದು ಸ್ವಾಗತಿಸಿದರು. ಲೀಲಾವತಿ ವಂದಿಸಿದರು.