ಕುಶಾಲನಗರ, ನ. 6: ಕುಶಾಲನಗರದ ಇತಿಹಾಸ ಪ್ರಸಿದ್ದ ಶ್ರೀ ಗಣಪತಿ ದೇವಾಲಯದ ಬ್ರಹ್ಮಕಲಶ ಮತ್ತು ನೂತನ ಗೋಪುರದ ಪ್ರತಿಷ್ಠಾಪನೋತ್ಸವದ 11 ನೇ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ದೇವಾಲಯದಲ್ಲಿ ಗಣಪತಿ ಹೋಮ, ಕಲಾ ಹೋಮ, ತತ್ವ ಹೋಮ, ಪೂರ್ಣಾಹುತಿ ನಡೆಯಿತು.
ಹೋಮದ ನಂತರ ದೇವರಿಗೆ ಅಭಿಷೆÉೀಕ ಮತ್ತು ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ದೇವಾಲಯ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರಬಾಬು ನೇತೃತ್ವ ದಲ್ಲಿ ಅರ್ಚಕರುಗಳಾದ ರಾಘವೇಂದ್ರ ಭಟ್, ಪರಮೇಶ್ವರ್ ಭಟ್ ಮತ್ತು ಸೋಮವಾರಪೇಟೆಯ ವ್ಯಾಸ್ ರಾವ್ ಪೂಜಾ ವಿಧಿ ನೆರವೇರಿಸಿದರು. ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ. ಎಸ್. ವಸಂತ ಕುಮಾರ್, ಕಾರ್ಯದರ್ಶಿ ಶ್ರೀನಿವಾಸರಾವ್, ಪ್ರಮುಖರಾದ ಎಸ್.ಎನ್. ನರಸಿಂಹಮೂರ್ತಿ, ಎಂ.ವಿ. ನಾರಾಯಣ, ಎಂ.ಕೆ. ದಿನೇಶ್, ವಿ.ಡಿ. ಪುಂಡರೀಕಾಕ್ಷ, ಶರವಣ ಕುಮಾರ್, ಅಪ್ಪಣ್ಣ, ಕೆ.ಎನ್. ದೇವರಾಜ್ ಮತ್ತು ಭಕ್ತಾದಿಗಳು ಇದ್ದರು.