ಮಡಿಕೇರಿ, ನ. 6: ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಆಫ್ ಮಂಗಳೂರು ವತಿಯಿಂದ ಮಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ನಲ್ಲಿ ಜಿಲ್ಲೆಯ ಬಿಟ್ಟಂಗಾಲದವರಾದ ಚೇಮಿರ ಸೀತಮ್ಮ ಅವರು ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಶಾಟ್ಫುಟ್ನಲ್ಲಿ ಚಿನ್ನದ ಪದಕ, ಜಾವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋನಲ್ಲೂ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಗಳಿಸುವ ಮೂಲಕ ಇವರು ಸಾಮಥ್ರ್ಯ ತೋರಿದ್ದಾರೆ. ಅರವತ್ತು ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಇವರು ಸ್ಪರ್ಧಿಸಿದ್ದು, ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಜರುಗಿತು.