ಸೋಮವಾರಪೇಟೆ, ನ. 7: ಇಲ್ಲಿಗೆ ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್, ಗ್ರಾಮಸ್ಥರಾದ ಬಿ.ಎಸ್. ನಾರಾಯಣ, ಹೆಚ್.ಪಿ. ರುದ್ರಪ್ಪ, ಶ್ರೀನಿವಾಸ್, ನಿತಿನ್, ಶರತ್, ಹರ್ಷ ಮತ್ತಿತರರು ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.