ಕೂಡಿಗೆ, ನ. 6: ಇಲ್ಲಿಗೆ ಸಮೀಪದ ತೊರೆನೂರು ಗ್ರಾ. ಪಂ. ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಕನಕ ಜಯಂತಿ ಆಚರಣೆ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಚಿಕ್ಕ ಅಳುವಾರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚಿಕ್ಕಅಳುವಾರದ ಕನಕದಾಸ ಯುವಕ ಸಂಘದ ವತಿಯಿಂದ ಆಯೋಜಿಸಲು ತೀರ್ಮಾನ ಕೈಗೊಳ್ಳ ಲಾಯಿತು. ಈ ಸಭೆಯು ಯುವಕ ಸಂಘದ ಅಧ್ಯಕ್ಷ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕನಕ ಸಮಾಜದ ಮುಖಂಡ ಹಾಗೂ ತಾಲೂಕು ಬಿ.ಜೆ.ಪಿ. ಎಸ್ಟಿ ಮೋರ್ಚಾದ ಅಧ್ಯಕ್ಷ ಪ್ರಭಾಕರ ಕಾರ್ಯಕ್ರಮದ ಮಾಹಿತಿ ಹಾಗೂ ಸಮಾಜದ ಪ್ರಗತಿಗೆ ದುಡಿದವರನ್ನು ಸನ್ಮಾನಿಸುವ ಬಗ್ಗೆ ಚರ್ಚೆ, ಕಲೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸುವ ಬಗ್ಗೆ ಅಲ್ಲದೆ ಚಿಕ್ಕಅಳುವಾರದಲ್ಲಿ ಇರುವ ಒಂದು ಎಕರೆ ಪ್ರದೇಶದಲ್ಲಿ ಸಮಾಜದ ಭವನ ನಿರ್ಮಾಣ ಕಾರ್ಯ ಬಗ್ಗೆ ಚರ್ಚೆಗಳು ನಡೆದವು. ನಂತರ ಅಲ್ಲಿನ ಜಾಗವನ್ನು ಶ್ರಮದಾನ ಮೂಲಕ ಕಾಡು ಕಡಿದು ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದರು. ಟಿ.ಕೆ. ಉದಯಕುಮಾರ್, ಮಂಜುನಾಥ ಕನಕದಾಸ ಯುವಕ ಸಂಘದ ಕಾರ್ಯದರ್ಶಿ ಧರ್ಮ, ಸಂಘ ನಿರ್ದೇಶಕರಾದ ರಾಜು, ಲೋಕೇಶ್, ಮೋಹನ್, ಕಾಳಪ್ಪ ಸೇರಿದಂತೆ ನೂರಾರು ಸಮಾಜದ ಪ್ರಮುಖ ಭಾಗವಹಿಸಿದರು.