ನಾಪೆೆÇÃಕ್ಲು, ನ.೬: ಸ್ಥಳೀಯ ಹಿಂದೂ ರುದ್ರಭೂಮಿಯನ್ನು ಗ್ರಾಮ ಪಂಚಾಯಿತಿಯಿAದ ಕಾಪಾಡಿಕೊಂಡು ಬರಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಗುಂಡಿ ತೆಗೆದ ಜಾಗ ಸ್ಮಶಾನ ಜಾಗವಲ್ಲ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಆವರು ಮಾತನಾಡಿದರು. ಸ್ಮಶಾನ ಜಾಗ ಪ್ರವೇಶದಲ್ಲಿಯೇ ಇದೆ. ಉಳಿದ ಜಾಗವನ್ನು ತ್ಯಾಜ್ಯ ವಿಲೇವಾರಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಕಂದಾಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿಗಳ ಭರವಸೆಯಂತೆ ಆ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನಮ್ಮ ಸ್ವಂತ ಹಣದಿಂದ ಗುಂಡಿ ತೆಗೆಯುವ ಕೆಲಸ ನಿರ್ವಹಿಸಿದ್ದೇವೆ. ಇದರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಪರಿವೀಕ್ಷಕರು, ತಹಶೀಲ್ದಾರ್ ಸೇರಿದಂತೆ ಯಾವದೇ ಅಧಿಕಾರಿಗಳ ಹಸ್ತಕ್ಷೇಪವಿಲ್ಲ ಎಂದು ಹೇಳಿದರು. ಕೆಲವರು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಗೂಬೆ ಕೂರಿಸಲು ಹೊರಟಿರುವದು ರಾಜಕೀಯ ಪ್ರೇರಿತ ಎಂದು ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮತ್ತು ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಆರೋಪಿಸಿದರು.
ನಾವು ಮನುಷ್ಯರು, ನಮಗೂ ಮಾನವೀಯತೆ ಇದೆ. ಯಾವದೇ ಜಾತಿ, ಧರ್ಮದ ಬಗ್ಗೆ ನಮಗೆ ಕೀಳು ಭಾವನೆ ಇಲ್ಲ. ಸತ್ತ ಮೇಲೆ ಎಲ್ಲರೂ ದೇವರ ಸಮಾನ, ಯಾವದೇ ಮೃತ ಶರೀರವನ್ನು ಎಸೆಯಲಿಲ್ಲ ಎಂದು ತಿಳಿಸಿದರು.
ಹಿಂದೂ ರುಧ್ರ ಭೂಮಿಯಲ್ಲಿ ಶವಾಗಾರವನ್ನು ನಿರ್ಮಿಸಲು ಈಗಾಗಲೇ ಕ್ರಮ ಕೈಗೊಂಡಿರುವದು ಹಿಂದೂ ವಿರೋಧಿ ನೀತಿಯೇ ಎಂದು ಅವರು ಪ್ರಶ್ನಿಸಿದರು. ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇಕ ಸ್ಮಶಾನ ನಿರ್ಮಿಸಲು ಜಾಗಕ್ಕಾಗಿ ಸಂಬAಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದ ಅವರು ತಪ್ಪು ಸಂದೇಶಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಟಿ.ಎ. ಮಹಮ್ಮದ್ ಇದ್ದರು.
ಅಧ್ಯಕ್ಷರಿಂದ ಪರಿಶೀಲನೆ
ಸ್ಥಳಕ್ಕೆ ಮಡಿಕೇರಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಲ್ಲಿರುವ ಹಿಂದೂ ರುದ್ರಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಕಸ ವಿಲೇವಾರಿಗಾಗಿ ಗುಂಡಿ ತೋಡಿರುವದು ಅಲ್ಲದೇ ಅಲ್ಲಿರುವ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಅಲ್ಲಿ ಹೂಳಲಾಗಿದ್ದ ಸುಮಾರು ೧೬ ಶವಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದರು. ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಭಜರಂಗದಳದ ನಾಪೋಕ್ಲು ಘಟಕದ ಸಂಚಾಲಕ ಬಿ.ಎಂ.ಪ್ರತೀಪ್, ಉಪಾಧ್ಯಕ್ಷ ಬಿ.ಸಿ.ರಾಧಾಕೃಷ್ಣ, ಭಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿನಯ್, ವಿವೇಕಾನಂದ ಯುವಕ ಸಂಘದ ರಾಜೇಂದ್ರ, ಹರಿದಾಸ, ಗ್ರಾಮಸ್ಥರಾದ ಚೋಕಿರ ಸಜಿತ್, ಅಪ್ಪನೆರವಂಡ ಕಿರಣ್‌ಕಾರ್ಯಪ್ಪ, ಸೇರಿದಂತೆ ಇನ್ನಿತರರು ಇದ್ದರು ಪ್ರಕರಣದ ಕುರಿತು ನೀಡಲಾಗಿರುವ ದೂರಿಗೆ ಸಂಬAಧಿಸಿದAತೆ ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ, ಎಎಸ್‌ಐ ಕುಶಾಲಪ್ಪ ಮತ್ತು ಸಿಬ್ಬಂದಿಗಳು ಸ್ಥಳದ ಮಹಜರು ನಡೆಸಿದರು.