ಸೋಮವಾರಪೇಟೆ, ನ. 6: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ಹೊನ್ನಮ್ಮ ವಿಶೇಷ ಚೇತನರ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಅವರು ಗಿಡ ನೆಡುವ ಮೂಲಕ ಸಂಘಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಜಿಲ್ಲಾ ಸಂಸ್ಥೆಯ ಮೇಲ್ವಿಚಾರಕರಾದ ಎ. ಸುರೇಶ್ ಮಾತನಾಡಿ, ವಿಶೇಷ ಚೇತನರಿಗೆ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಯೋಜನೆಯ ಅಂಗವಾಗಿ ಸಂಘವನ್ನು ಪ್ರಾರಂಭಿಸಲಾಗಿದೆ. ಇದರ ಪ್ರಯೋಜನವನ್ನು ವಿಕಲಚೇತನರು ಪಡೆದುಕೊಳ್ಳಬೇಕೆಂದರು. ಹೊನ್ನಮ್ಮ ವಿಶೇಷ ಚೇತನರ ಸಂಘದ ಅಧ್ಯಕ್ಷ ಕೆ.ಬಿ. ಪುಷ್ಪಾಧರ್, ಕಾರ್ಯದರ್ಶಿ ಮಧುಸೂದನ್, ಪಂಚಾಯಿತಿ ಪಿಡಿಒ ಹೇಮಲತ, ಶಾಲಾ ಶಿಕ್ಷಕರಾದ ಗಿರಿಗೌಡ, ಶಿವಶಂಕರ್ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.