ಗೋಣಿಕೊಪ್ಪಲು, ನ. 6: ಸಂತ ಥಾಮಸ್ ಶಾಲೆಯು ಈ ವರ್ಷ ಸುವರ್ಣ ಸಂಭ್ರಮ ಆಚರಿಸುತಿದ್ದು ಅದರ ಅಂಗವಾಗಿ ತಾ 7 (ಇಂದು) ರಂದು ವಿಜ್ಞಾನ, ಕಲೆ ಮತ್ತು ಕರ ಕೌಶಲ್ಯ ಪ್ರದರ್ಶನವನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಬೃಹತ್ ಪ್ರಮಾಣದಲ್ಲಿ ನಡೆಸಲು ಆಯೋಜಿಸಿದ್ದು ಇದರ ಉದ್ಘಾಟನೆಯನ್ನು ಜಿಲ್ಲೆಯ ಶಿಕ್ಷಣ ಉಪ ನಿರ್ದೇಶಕರಾದ ಪೆರಿಗ್ರಿನ್ ಮಚ್ಚಾಡೋರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ತಾಲೂಕಿನ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಟಿ.ಜೆ.ಪ್ರೇಮ್ ಕುಮಾರ್ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಅವರು ವಹಿಸಲಿದ್ದು ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಎಂ.ಪಿ.ಕೇಶವ ಕಾಮತ್, ಕುಲ್ಲಚಂಡ ಪ್ರಮೋದ್ ಗಣಪತಿ, ಪಿ.ಕೆ.ಪ್ರವೀಣ್, ಎ.ಜೆ.ಬಾಬು, ಸಮ್ಮದ್, ವಿಲ್ಸನ್ ಮತ್ತು ಪ್ರಭಾವತಿ ಅಲ್ಲದೆ ಗೋಣಿಕೊಪ್ಪಲು ವಲಯದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿರುತ್ತಾರೆ. ಗೋಣಿಕೊಪ್ಪಲು ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ದೆ ಏರ್ಪಡಿಸ ಲಾಗಿದೆ. ಸುತ್ತು ಮುತ್ತಲ ಶಾಲಾ ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಿಸಲು ಅನುವುಗೊಳಿಸಲಾಗುವದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.