ಸುಂಟಿಕೊಪ್ಪ, ನ.೬: ಕಂಬಿಬಾಣೆ ಗ್ರಾ.ಪಂ.ನ ೨೦೧೯-೨೦ನೇ ಸಾಲಿನ ನಮ್ಮ ಗ್ರಾಮ, ನಮ್ಮ ಯೋಜನೆ(ಜಿಪಿಡಿಪಿ) ಹಾಗೂ ಮಿಷನ್ ಅಂತ್ಯೋದಯ ಯೋಜನೆಯಡಿಯಲ್ಲಿ ಕರಡು ಯೋಜನೆಯ ಸಿದ್ಧಪಡಿಸಿ ಅನುಮೋದನೆಯನ್ನು ಪಡೆದುಕೊಳ್ಳುವ ಸಲುವಾಗಿ ತಾ. ೭ ರಂದು (ಇಂದು) ೧೧ ಗಂಟೆಗೆ
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ಕೃಷ್ಣ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ನಡೆಯಲಿದೆ.
ಸಭೆಗೆ ನೋಡಲ್ ಅಧಿಕಾರಿಯಾಗಿ ಸುಂಟಿಕೊಪ್ಪ ಪಶು ಚಿಕಿತ್ಸಾ ವೈದ್ಯಾಧಿಕಾರಿ ಡಾ.ಆನಂದ ಆಗಮಿಸಲಿದ್ದಾರೆ.