ಮಡಿಕೇರಿ, ನ. ೬ : ನಗರದ ಹಳೆಯ ಸೌದೆ ಡಿಪೋ ಬಳಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗವನ್ನು ನೂತನ ಜಿ.ಪಂ ಭವನಕ್ಕೆ ಸ್ಥಳಾಂತರ ಗೊಳಿಸುವ ಪ್ರಸ್ತಾಪಕ್ಕೆ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಶಾಸಕರು, ಜಿ.ಪಂ. ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಕೆ.ಎ.ರವಿಚಂಗಪ್ಪ ಅವರ ನೇತೃತ್ವದ ನಿಯೋಗ, ಇಂಜಿನಿಯರಿAಗ್ ವಿಭಾಗ ದೂರದ ಪ್ರದೇಶಕ್ಕೆ ಸ್ಥಳಾಂತರ ಗೊಳ್ಳುವದರಿಂದ ಜನಸಾಮಾನ್ಯರು, ಗುತ್ತಿಗೆದಾರರು ಹಾಗೂ ಕಚೇರಿ ಸಿಬ್ಬಂದಿಗಳಿಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಹಾಲಿ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಇರುವ ಕಟ್ಟಡ ಜಿ.ಪಂ ಅನುದಾನದಿಂದಲೇ ನಿರ್ಮಾಣಗೊಂಡಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಕೋಟೆ ಆವರಣದಿಂದ ಇಲ್ಲಿಗೆ ಸ್ಥಳಾಂತರಗೊAಡಿದೆ. ಈ ಪ್ರದೇಶ ಕಚೇರಿ ಕೆಲಸಕ್ಕೆ ಎಲ್ಲರಿಗೂ ಅನುಕೂಲಕರವಾಗಿದೆ. ಆದರೆ ಬಹುಸಂಖ್ಯೆಯಲ್ಲಿರುವ ಹಳೆಯ ಮತ್ತು ಹೊಸ ದಾಖಲೆಗಳನ್ನಿಡಲು ನಗರದಿಂದ ದೂರದಲ್ಲಿ ನಿರ್ಮಾಣ ಗೊಂಡಿರುವ ನೂತನ ಜಿ.ಪಂ ಭವನದ ಕೋಣೆಗಳಲ್ಲಿ ಸ್ಥಳಾವಕಾಶದ ಕೊರತೆ ಇದೆ. ಕಚೇರಿಯ ಅಳತೆಯಲ್ಲೂ ವ್ಯತ್ಯಾಸವಿದ್ದು, ಕೊಡಗು ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ನಿರ್ವಹಣೆಗೂ ತೊಂದರೆಯಾಗಲಿದೆ ಎಂದು ಪ್ರಮುಖರು ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದಾರೆ.
ಸಾರ್ವಜನಿಕರ ಹಿತ ದೃಷ್ಟಿಯಿಂದ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗವನ್ನು ಸ್ಥಳಾಂತರಿಸದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ವಿ.ಆರ್. ರವಿಕುಮಾರ್, ಉಪಾಧ್ಯಕ್ಷ ಟಿ.ಆರ್. ಪುರುಷೋತ್ತಮ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.