ಮಡಿಕೇರಿ, ನ. ೬ : ಕೂರ್ಗ್ ಬೈರೇಸ್ ಹಾಗೂ ಜಮ್ಮಾ ಕೋವಿ ಹಕ್ಕಿನ ಬಗ್ಗೆ ಆದೇಶ ಹೊರಡಿಸಲು ಕೇಂದ್ರ ಗೃಹ ಇಲಾಖೆ ವಿಳಂಬ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯ ಕ್ಷಮಾಪಣೆ ನೀಡಿದೆ.

ಕೋವಿ ಹಕ್ಕು ಸಂಬAಧಿಸಿದAತೆ ಇದ್ದ ಗೊಂದಲಕ್ಕೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಹಿನ್ನೆಲೆಯಲ್ಲಿ ವಿವಿಧ ಕೊಡವ ಸಮಾಜಗಳ ಮೂಲಕ ದಾಖಲಾತಿಗಳನ್ನು ನ್ಯಾಯಾಲಯ ಹಾಗೂ ಕೇಂದ್ರ ಗೃಹ ಖಾತೆಗೆ ಸಲ್ಲಿಸಿದ್ದರು. ಈ ಸಂಬAಧ ಉಚ್ಚ ನ್ಯಾಯಾಲಯ ಈ ಬಗ್ಗೆ ಪರಿಶೀಲನೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ ಗಡುವು ನೀಡಿತ್ತು. ಆದರೆ ನೀಡಿದ ಗಡುವಿನೊಳಗೆ ಆದೇಶ ನೀಡದ ಹಿನ್ನೆಲೆಯಲ್ಲಿ ಗೃಹ ಇಲಾಖೆಯಿಂದ ಕ್ಷಮಾಪಣೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ನ್ಯಾಯಾಲಯವು ಇಂದು ಕ್ಷಮಾಪಣೆ ನೀಡಿರುವದಾಗಿ ಹೈಕೋರ್ಟ್ ಹಿರಿಯ ವಕೀಲ ಎಂ.ಟಿ. ನಾಣಯ್ಯ ತಿಳಿಸಿದರು. ಪ್ರಕರಣಕ್ಕೆ ಸಂಬAಧಿಸಿದAತೆ ಗೃಹ ಇಲಾಖೆ ಕೋವಿ ಹಕ್ಕನ್ನು ೨೦೨೯ರ ಅಕ್ಟೋಬರ್ ೩೧ರವರೆಗೆ ವಿಸ್ತರಣೆ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ.