ಮಡಿಕೇರಿ, ನ. ೬: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಹನ ಸಂಚಾರ ತಡೆಯುವಂತೆ ನಿಂತಿರುವ ೨ ವಿದ್ಯುತ್ ಕಂಬಗಳು ನೂತನ ರಸ್ತೆ ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿವೆ.
ತಾ. ೨ ರಂದು ಮುಳ್ಳುಸೋಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಶಾಲನಗರ ಚೆಸ್ಕಾಂಗೆ ಗೊಂದಿಬಸವನಹಳ್ಳಿಯ ಲೋಕೇಶ್ ಎಂಬವರ ಮನೆಯ ಪಕ್ಕ ಹಾಗೂ ಶನೀಶ್ವರ ದೇವಸ್ಥಾನದ ಬಳಿ ಇರುವ ವಿದ್ಯುತ್ ಕಂಬಗಳನ್ನು ಅಲ್ಲಿಂದ ಸ್ಥಳಾಂತರಿಸುವAತೆ ಕೋರಿ ಪತ್ರದ ಮೂಲಕ ಮನವಿ ಮಾಡಿದ್ದರೂ ಕಂಬಗಳ ಸ್ಥಳಾಂತರ ಕಾರ್ಯ ಇನ್ನೂ ಆಗಿಲ್ಲ. ಆದರೂ ರಸ್ತೆಯ ಕಾಮಗಾರಿ ತಡವಾಗಬಾರದೆಂಬ ಉದ್ದೇಶದಿಂದ ಕಂಬಗಳ ಸುತ್ತ ಜಲ್ಲಿಕಲ್ಲು ಸುರಿದು ಗ್ರಾ.ಪಂ.ನಿAದ ರಸ್ತೆ ಕಾಮಗಾರಿ ಆರಂಭಿಸಲಾಗಿದೆ.
ಹೊAದಾಣಿಕೆ ಕೊರತೆಯಿಂದ ಮುಂದೆ ಆಗುವ ತೊಂದರೆಗೆ ಯಾರು ಹೊಣೆ? -ಪ್ರಜ್ವಲ್ ಜಿ.ಆರ್.