ಮಡಿಕೇರಿ, ನ. ೬: ಕಾನೂನಿಗೆ ವಿರುದ್ಧವಾದ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಹೋಂಸ್ಟೇಗಳನ್ನು ಶಾಶ್ವತವಾಗಿ ವ್ಯವಹಾರ ನಡೆಸದಂತೆ ಜಿಲ್ಲಾ ಆಡಳಿತ ಕ್ರಮಕೈಗೊಳ್ಳಬೇಕೆಂದು ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು, ಕಾನೂನಿಗೆ ಗೌರವ ಕೊಡದವರಿಂದ ಅವ್ಯವಹಾರಗಳು ಹೆಚ್ಚುತ್ತಿದೆ ಎಂದಿದ್ದಾರೆ. ಒಂದು ವೇಳೆ ಕಾನೂನಿಗೆ ವಿರುದ್ಧ ವ್ಯವಹಾರ ನಡೆಸುವ ಅಧಿಕೃತ ಹೋಂಸ್ಟೇಗಳು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವ ಕಿತ್ತು ಹಾಕುವದಾಗಿ ಎಚ್ಚರಿಸಿದ್ದಾರೆ.
ಬೆರಳೆಣಿಕೆಯ ಮಂದಿ ದಿಢೀರ್ ಹಣ ಮಾಡಲು ಹೊಲಸು ವ್ಯವಹಾರಕ್ಕೆ ಇಳಿದಿದ್ದು, ಇದರಿಂದ ಇಡೀ ಉದ್ಯಮಕ್ಕೆ ಮಸಿ ಬಳಿದಂತಾಗಿದೆ ಎಂದಿರುವ ಅವರು, ಹೋಂಸ್ಟೇ ಅಸೋಸಿಯೇಷನ್ ಸದಸ್ಯರು ಕಾನೂನು, ನೀತಿ-ನಿಯಮ ಪಾಲಿಸುತ್ತಿದ್ದಾರೆ ಎಂದಿದ್ದಾರೆ.
ಓಯೋ ವಿರುದ್ಧ ಹೋರಾಟ
ಓಯೋ ವ್ಯವಹಾರದಿಂದ ಬೆಂದಿರುವ ಸದಸ್ಯರ ಸಮಸ್ಯೆ ಪರಿಹಾರಕ್ಕೆ ಅಸೋಸಿಯೇಷನ್ ಇತರ ಟೂರಿಸಂ ಸಂಸ್ಥೆಗಳೊAದಿಗೆ ಮುಂದಾಗಿದ್ದು, ಕಾನೂನಾತ್ಮಕ ಹೋರಾಟಕ್ಕೆ ನೊಂದ ಸದಸ್ಯರು ಲಿಖಿತ ದೂರು ಸಲ್ಲಿಸಲು ಮುದ್ರಿತ ಫಾರಂಗಳನ್ನು ಸಂಗ್ರಹಿಸುವದಾಗಿ ಅನಂತಶಯನ ತಿಳಿಸಿದ್ದಾರೆ.