ಗೋಣಿಕೊಪ್ಪ ವರದಿ, ನ. ೫ : ರ‍್ವತೋಕ್ಲು ಗ್ರಾಮದಲ್ಲಿನ ಮೊಣ್ಣಿ (೪೦) ಎಂಬವರು ನವೆಂಬರ್ ೧ ರಿಂದ ಕಾಣೆಯಾಗಿದ್ದಾರೆ. ಯರವ ಭಾಷೆ ಮಾತನಾಡುವ ಇವರು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯಿಂದ ಕಾಣೆಯಾಗಿದ್ದಾರೆ ಎಂದು ಅವರ ಸಂಬAಧಿ ಅಣ್ಣಪ್ಪ ದೂರು ದಾಖಲಿಸಿದ್ದಾರೆ. ಮಾಹಿತಿ ದೊರೆತಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆ ಸಂಖ್ಯೆ ೦೮೨೭೪- ೨೪೭೩೩೩ ಸಂಖ್ಯೆಗೆ ತಿಳಿಸುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.