ಮಡಿಕೇರಿ, ನ. ೪: ಜಿಲ್ಲೆಯ ನಿವಾಸಿ, ಪ್ರಸ್ತುತ ಮೈಸೂರಿನ ಚಿನ್ಮಯಿ ವಿದ್ಯಾಲಯದ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಜ್ಜೇಟಿರ ಯುಕ್ತಾ, ರಾಷ್ಟç ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ.

ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿಯಲ್ಲಿ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಯುಕ್ತಾ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಯಲಿರುವ ರಾಷ್ಟç ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ಮಡಿಕೇರಿ ನಿವಾಸಿ ಅಜ್ಜೇಟಿರ ಮೋಹನ್ (ಜೈ), ಮಮತ ದಂಪತಿಯ ಪುತ್ರಿಯಾಗಿರುವ ಯುಕ್ತಾ, ಮೈಸೂರಿನ ರಾಮ್ ಅವರ ಬಳಿ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾಳೆ.