ಗೋಣಿಕೊಪ್ಪ ವರದಿ, ನ. ೫ : ಸ್ಥಳೀಯ ಗ್ರಾ.ಪಂ. ೫ನೇ ವಾರ್ಡ್ಗೆ ನಡೆಯಲಿರುವ ಚುನಾವಣೆಗೆ ಇಬ್ಬರು ಸ್ಪರ್ಧಾ ಕಣದಲ್ಲಿದ್ದಾರೆ. ಎಸ್.ಎ. ತಸ್ಲಿಮ್ ಆರೀಫ್ ಮತ್ತು ನಜೀರ್ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ. ಸೋಮವಾರ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಎಂ. ಎ. ಶಮೀರ್ ನಾಮಪತ್ರ ಹಿಂಪಡೆದುಕೊAಡರು. ಇದರಿಂದಾಗಿ ಇಬ್ಬರು ಚುನಾವಣೆಯಲ್ಲಿ ಉಳಿದುಕೊಂಡಿದ್ದು, ತಾ. ೧೨ ಕ್ಕೆ ಮತದಾನ ನಡೆಯಲಿದೆ.