ಮಡಿಕೇರಿ, ನ. ೩: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ‘ಹಸಿರು - ದೀಪಾವಳಿ’ ಜಾಗೃತಿ ಹಾಗೂ ‘ಎಥ್ನಿಕ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಅವರು ಹಸಿರು - ದೀಪಾವಳಿಯ ಮಹತ್ವ ಹಾಗೂ ಅದರ ಕುರಿತು ಅರಿವು ಮೂಡಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ವಿದ್ಯಾರ್ಥಿಗಳಿಗೆ ಹಸಿರು - ದೀಪಾವಳಿಯ ಕುರಿತು ಪ್ರಮಾಣವಚನ ಬೋಧಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ. ನಮ್ಮ ದೇಶದ ವಿವಿಧ ಜನಾಂಗೀಯ ವೇಷ ಭೂಷಣಗಳ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ‘ಎಥ್ನಿಕ್ ಡೇ’ಯನ್ನು ಕೂಡ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಸೃತಿಕ ಉಡುಪುಗಳನ್ನು ಧರಿಸಿ ಕಂಗೊಳಿಸಿದರು ಹಾಗೂ ಸಾಂಸೃತಿಕ ಆಹಾರವನ್ನು ಸ್ನೇಹಿತರೊಂದಿಗೆ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಎಂ.ಬಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.