ಮಡಿಕೇರಿ, ನ. ೩: ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರದಿಂದ ತೃಪ್ತರಾಗದ ಬಿಜೆಪಿ ಮಂದಿ ಟಿಪ್ಪು ವಿವಾದವನ್ನು ಜೀವಂತವಾಗಿಡಬೇಕೆನ್ನುವ ಉದ್ದೇಶದಿಂದ ಪಠ್ಯ ಪುಸ್ತಕದಲ್ಲಿನ ಟಿಪ್ಪು ಅಧ್ಯಾಯದ ವಿಚಾರವನ್ನು ಕೆದಕಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ. ಹ್ಯಾರಿಸ್ ಪಠ್ಯ ಕ್ರಮದಿಂದ ಟಿಪ್ಪು ಅಧ್ಯಾಯವನ್ನು ಕೈ ಬಿಡುವ ನಿರ್ಧಾರ ಖಂಡನೀಯವೆAದು ತಿಳಿಸಿದ್ದಾರೆ. ನಿತ್ಯ ಭಾವನಾತ್ಮಕ ವಿಚಾರಗಳಲ್ಲೇ ವಿವಾದಗಳನ್ನು ಸೃಷ್ಟಿಸುವ ಬಿಜೆಪಿ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಬ್ದಾರಿ ಪ್ರತಿಯೊಂದು ಸರ್ಕಾರದ ಮೇಲಿದೆ. ಟಿಪ್ಪು ಸುಲ್ತಾನ್ ಒಬ್ಬ ವೀರ ಸ್ವಾತಂತ್ರö್ಯ ಹೋರಾಟಗಾರನಾಗಿದ್ದು, ಇತಿಹಾಸದಲ್ಲಿ ದಾಖಲಾಗಿರುವ ಅಂಶಗಳನ್ನು ಅಧ್ಯಯನ ಮಾಡುವ ದೊಡ್ಡ ಮನಸ್ಸನ್ನು ಬಿಜೆಪಿ ಮಂದಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಯಾವದೇ ಕಾರಣಕ್ಕೂ ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಬಾರದೆಂದು ಆಗ್ರಹಿಸಿದ್ದಾರೆ.