ಮಡಿಕೇರಿ, ನ. ೪: ಅಂತರ್ಜಾಲ ದುರ್ಬಳಕೆಯೊಂದಿಗೆ ಎಸಗುವ ಅಪರಾಧಗಳು; ಮಾದಕ ವಸ್ತುಗಳ ದಂಧೆ; ಬ್ಯಾಂಕ್‌ಗಳ ಖಾತೆಗಳಿಂದ ಹಣ ಲಪಟಾಯಿಸುವದು ಇಂತಹ ಅಪರಾಧಗಳನ್ನು ಹತ್ತಿಕ್ಕುವ ದಿಸೆಯಲ್ಲಿ ಪ್ರಯತ್ನ ಸಾಗಿದೆ. ಆ ದಿಸೆಯಲ್ಲಿ ಪ್ರತ್ಯೇಕ ಸಿಇಎನ್ ಅಪರಾಧ ತಡೆ ಪೊಲೀಸ್ ಠಾಣೆಯು ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಮೋಸದ ಜಾಲಕ್ಕೆ ಸಿಲುಕದಂತೆ ಜಾಗೃತರಾಗುವಂತೆ ಸಂಬAಧಿಸಿದ ಅಧಿಕಾರಿಗಳು ಸಲಹೆ ಮಾಡಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರನ್ನು ಮೊಬೈಲ್‌ಗಳಲ್ಲಿ ಸಂಪರ್ಕಿಸಿ; ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಉಳಿತಾಯ ಖಾತೆ ಇತ್ಯಾದಿಯನ್ನು ತಾಂತ್ರಿಕ ದೋಷದ ಕಾರಣವೊಡ್ಡಿ ಗ್ರಾಹಕರನ್ನು ಮೋಸಗೊಳಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುವಂತಾಗಿದೆ. ಅಲ್ಲದೆ; ಗೃಹ ಸಾಲ, ಆಭರಣ ಸಾಲ, ವಾಹನ ಸಾಲ, ಹಳೆಯ ವಾಹನ ಇತ್ಯಾದಿ ಕಡಿಮೆ ಬೆಲೆಗೆ ಒದಗಿಸುವ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ.ಈ ರೀತಿಯಾಗಿ ಹೊಸ ಹೊಸ ಆಮಿಷಗಳನ್ನು ಮೊಬೈಲ್ ಸಂಪರ್ಕ ದಿಂದ ನೀಡುವ ಅಪರಿಚಿತರು, ಮುಗ್ಧ ಜನತೆಯ ಬ್ಯಾಂಕ್‌ಗಳ ಉಳಿತಾಯ ಖಾತೆ ಸಂಖ್ಯೆ; ಬ್ಯಾಂಕ್ ಖಾತೆಯ ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು; ಅರೆಕ್ಷಣದಲ್ಲಿ ಹಣವನ್ನು ಡ್ರಾ ಮಾಡಿ ಮೋಸ ಗೊಳಿಸುತ್ತಿರುವ ಪ್ರಸಂಗಗಳು ಮೇಲಿಂದ ಮೇಲೆ ನಡೆಯು ವಂತಾಗಿದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಸಿಇಎನ್ ಪೊಲೀಸ್ ಘಟಕ ಸಲಹೆ ನೀಡಿದೆ.ಬ್ಯಾಂಕ್ ಕರೆ ಬರುವದಿಲ್ಲ : ಸಾಮಾನ್ಯವಾಗಿ ಯಾವದೇ ಬ್ಯಾಂಕ್‌ಗಳಿAದ ಸಂಬAಧಿಸಿದ ಅಧಿಕಾರಿಗಳು ಅಥವಾ ಸಿಬ್ಬಂದಿ ನೇರವಾಗಿ ಗ್ರಾಹಕರಿಗೆ ಮೊಬೈಲ್ಹಾಗೂ ದೂರವಾಣಿ ಮುಖಾಂತರ ಕರೆಗಳನ್ನು ಮಾಡುವದಿಲ್ಲ; ಬದಲಾಗಿ ಮೋಸದ ಜಾಲದ ವ್ಯಕ್ತಿಗಳಷ್ಟೇ ಇಂತಹ ಕರೆ ಮಾಡಿ ಅಪೂರ್ಣ ಕನ್ನಡ, ಹಿಂದಿ, (ಮೊದಲ ಪುಟದಿಂದ) ಇಂಗ್ಲೀಷ್ ಭಾಷೆಗಳಲ್ಲಿ ವಂಚಿಸುತ್ತಿದ್ದಾರೆ ಎಂದು ಸಿಇಎನ್ ಪೊಲೀಸ್ ಘಟಕ ಎಚ್ಚರಿಸಿದೆ.

ಮಾತ್ರವಲ್ಲದೆ; ವಿದೇಶಗಳಲ್ಲಿ ಹಾಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿಯೂ ವಂಚಿಸುತ್ತಿದ್ದು; ಇಂತಹ ಜಾಹೀರಾತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಜಾರ್ಖಂಡ್, ಬಿಹಾರ, ಕಲ್ಕತ್ತ ಮುಂತಾದೆಡೆಯಿAದ ಜಿಲ್ಲೆಯ ಗ್ರಾಹಕರಿಗೆ ವಂಚಿಸಿರುವ ಸುಮಾರು ೬೦ ಪ್ರಕರಣಗಳು ಈ ತನಕ ಬೆಳಕಿಗೆ ಬಂದಿದೆ.

ಬೇಧಿಸಿದ ಪ್ರಕರಣ : ಈ ರೀತಿ ಕುಶಾಲನಗರದ ಕರ್ನಾಟಕ ಬ್ಯಾಂಕ್ ಖಾತೆಯ ಗ್ರಾಹಕರೊಂದಿಗೆ ವಂಚಿಸಿದ ಪ್ರಕರಣವೊಂದನ್ನು ಸಿಇಎನ್ ಪೊಲೀಸ್ ತಂಡ ಬೇಧಿಸಿದ ಆರೋಪಿಯಿಂದ ಹಣವನ್ನು ಹಿಂಪಡೆದು ಸಂಬAಧಿಸಿದ ವ್ಯಕ್ತಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಕುಶಾಲನಗರ ಗೊಂದಿ ಬಸವನಹಳ್ಳಿ ಮೂಲದ ಜಿ.ಹೆಚ್. ಅಶ್ರಫ್ ಎಂಬವರ ಖಾತೆಯಿಂದ; ಕಳೆದ ಜೂನ್ ೧೮ ರಂದು ರೂ. ೭೯,೯೯೪ ಮೊತ್ತವನ್ನು ಲಪಟಾಯಿಸಲಾಗಿತ್ತು. ಈ ಬಗ್ಗೆ ದೊರೆತ ದೂರಿನ ಮೇರೆಗೆ ತನಿಖೆ ನಡೆಸಿದ ಸಿಇಎನ್ ಪೊಲೀಸರು ದಾವಣಗೆರೆಯ ಭರತ್ ಎಂಬಾತನನ್ನು ಬಂಧಿಸಿತ್ತು. ಅಲ್ಲದೆ; ಆರೋಪಿಯಿಂದ ಮೋಸವೆಸಗಿದ್ದ ಹಣವನ್ನು ವಶಕ್ಕೆ ಪಡೆದು; ಮೋಸ ಹೋಗಿದ್ದ ಗ್ರಾಹಕರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದೆ.

ಮೊಬೈಲ್ ಬಗ್ಗೆ ಎಚ್ಚರವಿರಬೇಕು : ಅನೇಕರು ಕೆಲವೊಮ್ಮೆ ಮೊಬೈಲ್‌ಗಳನ್ನು ಕಳೆದುಕೊಂಡು; ಪೊಲೀಸ್ ಪುಕಾರು ನೀಡದಿರುವದು; ‘ಸಿಮ್’ಗಳನ್ನು ಬದಲಾಯಿಸಿ; ಬಳಕೆ ಸಂಖ್ಯೆಯನ್ನು ಸ್ಥಗಿತಗೊಳಿಸಿ ಹೊಸ ಸಂಖ್ಯೆ ಪಡೆಯುವ ಸಂದರ್ಭ ಕೂಡ ಎಚ್ಚರವಹಿಸುವಂತೆ ಸಲಹೆ ನೀಡಿದೆ.

ಕಾರಣ ಕೆಲವೊಮ್ಮೆ ಗ್ರಾಹಕರು ಸ್ಥಗಿತಗೊಳಿಸುವ ಹಳೆಯ ‘ಸಿಮ್’ ಸಂಖ್ಯೆಗಳನ್ನು ಸಂಬAಧಿಸಿದ ಸಂಸ್ಥೆಗಳು ಬೇರೆ ಗ್ರಾಹಕರಿಗೆ ನೀಡುತ್ತಾರೆ. ಇಂತಹ ಸಂದರ್ಭ ಆ ಸಂಖ್ಯೆ ಹಿಂದಿನ ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡರೆ ವಂಚನೆಗೆ ದಾರಿ ಕಲ್ಪಿಸಿದಂತಾಗುತ್ತದೆ ಎಂದು ಅಪರಾಧ ತಡೆ ಪೊಲೀಸರು ನೆನಪಿಸಿದ್ದಾರೆ.

ಇಂತಹ ಮೋಸದ ಜಾಲಕ್ಕೆ ಸಿಲುಕುವವರು ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ ಸಿಇಎನ್ ಘಟಕ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಂಪರ್ಕಿಸಿ ದೂರು ಸಲ್ಲಿಸುವಂತೆ ಸಲಹೆ ನೀಡಲಾಗಿದೆ.