ಮಡಿಕೇರಿ, ನ. ೩: ನಗರದ ಹೊಸ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದ ಪತಿ ಹಾಗೂ ಪತ್ನಿ ನಡುವೆ ಕ್ಷÄಲ್ಲಕ ಕಾರಣಕ್ಕೆ ಕಲಹ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವದರೊಂದಿಗೆ ಪತ್ನಿಯನ್ನು ಮನಬಂದAತೆ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಲೆಗೈದಿರುವ ಪೈಶಾಚಿಕ ಕೃತ್ಯವೊಂದು ನಿನ್ನೆ ರಾತ್ರಿ ಸಂಭವಿಸಿದೆ. ಹೊಸ ಬಡಾವಣೆಯ ನಿವಾಸಿ, ಕೆ. ಸುಮನ್ ಮುದ್ದಯ್ಯ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಕಾರ್ಮಿಕ ಮಹಮ್ಮದ್ ಶರೀಫ್ ಎಂಬಾತ ಈ ಕೃತ್ಯ ಎಸಗಿದ್ದು, ಆತನ ಪತ್ನಿ ಜುಬೈದಾ (೨೫) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.ಕೇರಳದ ಕಾಸರಗೋಡು ಮೂಲದ ಜುಬೈದಾ ಹಾಗೂ ಇಲ್ಲಿನ ಚಾಮುಂಡೇಶ್ವರಿ ನಗರದ ಮಹಮ್ಮದ್ ಶರೀಪ್ ಮದುವೆಯಾಗಿ ೭ ವರ್ಷಗಳು ಕಳೆದಿವೆ. ಇಲ್ಲಿನ ಹೊಸ ಬಡಾವಣೆಯಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು; ಈ ದಂಪತಿ ನಡುವೆ ರಾತ್ರಿ ೧೦.೩೦ರ ವೇಳೆ ಕಲಹ ನಡೆದಿದೆ.ಜುಬೈದಾ ಅವರ ನಡತೆ ಬಗ್ಗೆ ಸಂಶಯಗೊAಡು ಜಗಳಕ್ಕಿಳಿದಿರುವ ಆರೋಪಿಯು; ಮನೆಯ ಒಳಗಡೆ ಆಕೆಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಪೈಶಾಚಿಕ ಕೃತ್ಯ ಎಸಗಿದ್ದು; ಈ ವೇಳೆ ಮಾರಣಾಂತಿಕ ಘಾಸಿಗೊಂಡ ಆಕೆ ಪ್ರಾಣ ರಕ್ಷಣೆಗಾಗಿ ಕಿರುಚಾಡಿದ ಧ್ವನಿ ಮನೆ ಮಾಲೀಕರಿಗೆ ಕೇಳಿಸಿದೆ.ಕೂಡಲೇ ಅವರು ಧಾವಿಸುವಷ್ಟ ರಲ್ಲಿ ರಕ್ತದ ಮಡುವಿನಲ್ಲಿದ್ದ ಜುಬೈದಾಳನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಮೇರೆಗೆ ಡಿವೈಎಸ್‌ಪಿ ಬಿ.ಪಿ. ದಿನೇಶ್‌ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಸದಾಶಿವಯ್ಯ ಮತ್ತು ಮಹಿಳಾ ಸಿಬ್ಬಂದಿ ಧಾವಿಸಿ ಜುಬೈದಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ವೇಳೆ ತೀವ್ರ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದು; ತಲೆಮರೆಸಿ ಕೊಂಡಿದ್ದ ಆರೋಪಿ ಮಹಮ್ಮದ್ ಶರೀಫ್‌ನನ್ನು ಪೊಲೀಸರು ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿ ಬೆಳಗಿನ ಜಾವ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗೀಡಾಗಿರುವ ಜುಬೈದಾ ಸಂಬAಧಿಕರು ಇಂದು ಆಗಮಿಸುವದ ರೊಂದಿಗೆ; ಮೃತೆಯ ಇಬ್ಬರು ಪುಟ್ಟ ಗಂಡುಮಕ್ಕಳೊAದಿಗೆ ಗೋಳಾಡುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.
ಆರೋಪಿಯು ದುಷ್ಕೃತ್ಯಕ್ಕೆ ಬಳಸಿರುವ ಚೂರಿ ಇತ್ಯಾದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವದರೊಂದಿಗೆ; ಮಹಮ್ಮದ್ ಶರೀಪ್‌ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಕೂಡ ಇಂದು ಸ್ಥಳ ಮಹಜರು ಕುರಿತು ಹಾಗೂ ಆರೋಪಿಯ ಹಿನ್ನೆಲೆ ಯೊಂದಿಗೆ ದುಷ್ಕೃತ್ಯದ ಮಾಹಿತಿ ಕಲೆ ಹಾಕಿದರು. ನಿನ್ನೆ ತಡರಾತ್ರಿ ನಡೆದಿರುವ ಈ ದುಷ್ಕೃತ್ಯದಿಂದ ಅಕ್ಕಪಕ್ಕ ನಿವಾಸಿಗಳು ಆತಂಕಗೊAಡಿದ್ದ ದೃಶ್ಯ ಎದುರಾಯಿತು.