ಶನಿವಾರಸಂತೆ, ನ. ೩: ದೇವಾಲಯಗಳು ಕೇವಲ ಪೂಜೆ ಪುನಸ್ಕಾರ, ಉತ್ಸವ, ವಾರ್ಷಿಕೋತ್ಸವಕ್ಕೆ ಮೀಸಲಾಗದೇ ಲೋಕ ಸೇವೆಯನ್ನು ಮಾಡುವಂತಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ ಹೇಳಿದರು.ಸಮೀಪದ ಬೆಸೂರು-ನಿಲುವಾಗಿಲು ಗ್ರಾಮದ ಶ್ರೀಬಾಲ ತ್ರಿಪುರಸುಂದರಿ ದೇವಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ದೇವಾಲಯ ಸಮಿತಿ ಸಹಭಾಗಿತ್ವದಲ್ಲಿ ನಡೆದ ‘ಶರಣ ಸಂಗಮ-ಸAಸ್ಕöÈತಿ ದರ್ಶನ’ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ವಿದ್ಯಾರ್ಥಿಗಳೇ ಮುಖ್ಯ ಪ್ರಜೆಗಳಾಗಿದ್ದು ಮಕ್ಕಳಲ್ಲಿ ಸಭ್ಯತೆ, ಸಂಸ್ಕöÈತಿಯನ್ನು ಬಿತ್ತಬೇಕು. ಶರಣ ಸಾಹಿತ್ಯ ಯಾವದೇ ಕಟ್ಟುಪಾಡುಗಳಿಗೆ ಒಳಗಾಗಬಾರದು. ಮಾನವರೆಲ್ಲ ಒಂದೇ ಎಂಬ ಭಾವನೆಯೊಂದಿಗೆ ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತ ಅನ್ವಯವಾಗಬೇಕು ಎಂದು ಚನ್ನಬಸಪ್ಪ ಹೇಳಿದರು.

ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿ ಜನರ ಬದುಕಿನಲ್ಲಿ ನಿತ್ಯ ಸತ್ಯವಾಗ ಬೇಕು. ಮನುಷ್ಯನಿಗೆ ಆಸೆ ಸಹಜವಾದರೂ ಜೀವನವನ್ನು ಕಲ್ಮಶ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ನಡೆದುಕೊಳ್ಳುವದೇ ಧ್ಯೇಯವಾಗಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ಆಶಯ ನುಡಿಗಳನ್ನಾಡಿ, ಶರಣರ ಚಿಂತನೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಶರಣ ಸಂಗಮ-ಸAಸ್ಕöÈತಿ ದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಜಿ.ಪA. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ