ಮಡಿಕೇರಿ, ನ. ೩: ಕೊಡಗು ಜಿಲ್ಲೆಯ ಅಲ್ಲಲ್ಲಿ ತಾ. ೧ರಂದು ವಿವಿಧ ಸಂಘ- ಸಂಸ್ಥೆಗಳಿAದ ಕನ್ನಡ ರಾಜ್ಯೋತ್ಸವ ಸಡಗರ - ಸಂಭ್ರಮದಿAದ ಆಚರಣೆಗೊಂಡಿತು.
ಸೋಮವಾರಪೇಟೆ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಕಸಾಪ ಭವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ಸರ್ಕಾರವು ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು. ಭಾಷೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ಅಭಿಪ್ರಾಯಿಸಿದರು.
ಹಿರಿಯ ಸಾಹಿತಿ ನ.ಲ. ವಿಜಯ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಕನ್ನಡಿಗರು ಹೆಚ್ಚು ಅಭಿಮಾನ ಮೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ಸಮಗ್ರ ಕರ್ನಾಟಕದ ಒಗ್ಗೂಡುವಿಕೆಯ ಔಚಿತ್ಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಜವರಪ್ಪ, ಜಿಲ್ಲಾ ನಿರ್ದೇಶಕಿ ಸುಮಾ ಸುದೀಪ್, ಪ.ಪಂ. ಸದಸ್ಯೆ ನಳಿನಿ ಗಣೇಶ್, ಕಸಾಪ ಪದಾಧಿಕಾರಿ ನಿರ್ವಾಣಿ ಶೆಟ್ಟಿ, ಜೋಕಿಂವಾಸ್, ಎಸ್.ಕೆ. ಮಲ್ಲಪ್ಪ, ಕೆ.ಪಿ. ಸುದರ್ಶನ್, ಬಿ.ಈ. ಜಯೇಂದ್ರ, ಚೌಡ್ಲು ಗ್ರಾ.ಪಂ. ಸದಸ್ಯ ಸಿ.ಸಿ. ನಂದ, ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಸಾಪ ತಾಲೂಕು ಕೋಶಾಧ್ಯಕ್ಷ ವೀರರಾಜು, ಪದಾಧಿಕಾರಿ ಕೆ.ಎ. ಆದಂ, ಪುಟ್ಟಣ್ಣ ಆಚಾರ್ಯ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.ಕುಶಾಲನಗರ : ಕುಶಾಲನಗರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುವ ರಸ್ತೆಯ ಕನ್ನಡಾಂಭೆ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಿಲ್ದಾಣದ ಆಟೋ ಚಾಲಕರು ತಮ್ಮ ಆಟೋಗಳಿಗೆ ಕನ್ನಡ ಧ್ವಜವನ್ನು ಅಳವಡಿಸುವದರೊಂದಿಗೆ ನಿಲ್ದಾಣವನ್ನು ಕನ್ನಡ ಬಾವುಟಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಆಟೋ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ಮತ್ತು ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ನಿಲ್ದಾಣದ ಆಟೋ ಚಾಲಕರ ಸಂಘದಿAದ ಅನ್ನದಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸಂಚಾರಿ ಪೊಲೀಸ್ ಅಧಿಕಾರಿ ಕುಶಾಲಪ್ಪ, ಕನ್ನಡಾಂಬೆ ಆಟೋ ಸಂಘದ ಅಧ್ಯಕ್ಷ ಮಹೇಶ್ ಪದಾಧಿಕಾರಿ ಸಂತೋಷ್, ಅಭಿ, ಗುರು, ಅನೀಶ್, ಮುನೀರ್, ಸುನಿಲ್, ಮುರಳಿ ಮತ್ತಿತರರು ಇದ್ದರು.ಮಡಿಕೇರಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೋಟೆ ಆವರಣದಲ್ಲಿನ ಹಳೆಯ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಸಾಪ ಕಚೇರಿ ಸ್ಥಳಾಂತರಗೊAಡಿದ್ದು ಅಲ್ಲಿ ಸೂಕ್ತ ಅವಕಾಶವಿಲ್ಲದ ಕಾರಣ ಹಳೆಯ ಕಚೇರಿ ಬಳಿ ಧ್ವಜಾರೋಹಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಸಾಪ ನಿವೇಶನದಲ್ಲಿಯೇ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಲಾಗುವದೆಂದರು. ಕನ್ನಡ ಎಲ್ಲರ ಉಸಿರಾಗಲಿ, ಕನ್ನಡ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಕಾರ್ಯದರ್ಶಿ ಡಾ.ಕೂಡಕಂಡಿ ದಯಾನಂದ, ಜಿಲ್ಲಾ ನಿರ್ದೇಶಕ ಕೋಡಿ ಚಂದ್ರಶೇಖರ್, ಮಡಿಕೇರಿ ತಾಲೂಕಿನ ನಿರ್ದೇಶಕರಾದ ಸುನಿತಾ ಪ್ರೀತು, ಆರ್.ಪಿ. ಚಂದ್ರಶೇಖರ್, ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಕಚೇರಿ ಸಿಬ್ಬಂದಿ ಶ್ವೇತಾ ಇದ್ದರು.ನಾಪೋಕ್ಲು : ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಅಭಿವೃದ್ಧಿ ಪಡಿಸಿ ಉತ್ತಮ ಶಿಕ್ಷಣ ನೀಡುವಂತಾಗಬೇಕೆAದು ಜಿಲ್ಲಾ ಪಂಚಾಯತ್ ಸದಸ್ಯ ಮುರುಳೀಧರ್ ಕರುಂಬಮ್ಮಯ್ಯ ಹೇಳಿದರು. ಅವರು ಸ್ಥಳೀಯ ಸರಕಾರಿ ಶಾಲಾ ಮೈದಾನದಲ್ಲಿ ನಾಪೆೆÇÃಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಕೂಡಿಗೆ: ಸರ್ಕಾರಿ ಪದವಿ ಪೂರ್ವ ಕಾಲೇಜು ಶಿರಂಗಾಲದಲ್ಲಿ ಕನ್ನಡ ನುಡಿ ಹಬ್ಬದ ಆಚರಣೆಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಹೂವನ್ನು ಎರೆಯುವ ಮೂಲಕ ಹಾಗೂ ದೀಪವನ್ನು ಬೆಳಗುವದರ ಮೂಲಕ ಕಾರ್ಯಕ್ರಮವನ್ನು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಉದ್ಘಾಟಿಸಿದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕನ್ನಡ ಶಿಕ್ಷಕ ವಿಜಯ ಕುಮಾರ ಕನ್ನಡ ನಾಡುನುಡಿಗೆ ತನ್ನದೆಯಾದ ಐತಿಹಾಸಿಕ ಹಿನ್ನೆಲೆ ಇದೆ ಕವಿರಾಜ ಮಾರ್ಗದ ಪ್ರಕಾರ ಕನ್ನಡ ನಾಡು ಗೋದಾವರಿಯಿಂದ ಕಾವೇರಿ ವರೆಗೆ ಇತ್ತು ಇಂದು ಅದರ ವಿಸ್ತಾರ ತಗ್ಗಿದೆ. ಆದರೆ, ಭಾಷೆಯ ಹಿರಿಮೆ ಇಡೀ ದೇಶದಲ್ಲಿ ಹೆಚ್ಚಾಗಿದೆ ಎಂದರು. ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ ಎನ್ನುವ ಮಾತಿನಂತೆ ಇಂಗ್ಲಿಷ್ ಭಾಷೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಮೋಹ ಹೆಚ್ಚಾಗಿದೆ, ಇದರಿಂದಾಗಿ ಕನ್ನಡ ಭಾಷೆ ಕಳೆಗುಂದಿದೆ. ಅದು ಆಗಬಾರದು ಮಾತೃ ಭಾಷೆಗೆ ತನ್ನದೇ ಆದ ಪ್ರಾಶಸ್ತ÷್ಯವನ್ನು ನಾವು ಕೊಡಬೇಕಾಗಿದೆ ಎಂದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಕನ್ನಡ ನುಡಿ ಹಬ್ಬದ ಆಚರಣೆ ನವೆಂಬರ್ ತಿಂಗಳಿನಲ್ಲಿ ಮಾತ್ರ ನಾವು ಆಚರಿಸದೆ ವರ್ಷವಿಡೀ ಆ ನುಡಿಯನ್ನು ಮಾತನಾಡುವ ಮೂಲಕ ಮಾತೃ ಪ್ರೇಮಿಗಳಾಗಬೇಕು ಎಂದು ಕರೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಸ್.ಎಸ್. ಕೃಷ್ಣ ಉಪನ್ಯಾಸ ಎಚ್.ಆರ್. ಶಿವಕುಮಾರ್ ಮೊದಲಾದವರು ಇದ್ದರು.ವೀರಾಜಪೇಟೆ: ‘‘ಕನ್ನಡ ಪರ ವೇದಿಕೆ ಹುಟ್ಟಿದ್ದೇ ನಾಡುನುಡಿಯ ರಕ್ಷಣೆಗಾಗಿ, ಯಾವಾಗ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಅತಿಯಾಯಿತೋ, ಪರಭಾಷಿಗರ ಹಾವಳಿ ಹೆಚ್ಚಾಯ್ತೋ ಆಗ ಹುಟ್ಟಿದ ವೇದಿಕೆ ಕರ್ನಾಟಕ ರಕ್ಷಣಾ ವೇದಿಕೆ. ಕನ್ನಡ ನಮ್ಮ ಜೀವನದ ಭಾಷೆಯಾಗಬೇಕು’’ ಎಂದು ವೀರಾಜಪೇಟೆ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿಶ್ವನಾಥ್ ಸಿಂಪಿ ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವರಾಮೇಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪರ ಭಾಷೆಗಳ ಮೇಲಿನ ವ್ಯಾಮೋಹದಿಂದ ಇಂದು ಕನ್ನಡ ಬಾಷೆಯನ್ನು ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಅದು ನಿಲ್ಲಬೇಕೆಂದರೆ ಕನ್ನಡ ಭಾಷೆಯನ್ನು ಪ್ರೀತಿಯಿಂದ, ಶ್ರದ್ದೆಯಿಂದ ಮನಸ್ಸು ಬಿಚ್ಚಿ ಮಾತನಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕರುಂಬಯ್ಯ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಡುತ್ತಾ, ‘‘ರಕ್ತದಾನವನ್ನು ಆರೋಗ್ಯವಂತ ವ್ಯಕ್ತಿಗಳು ಪ್ರತಿ ಆರು ತಿಂಗಳಿಗೊಮ್ಮೆ ಮಾಡಬಹುದು’’ ಎಂದರು.
ನAತರ ಮಾತನಾಡಿದ ಮುಖ್ಯ ಅತಿಥಿ ಡಾ. ದುರ್ಗಾಪ್ರಸಾದ್, ‘‘ಈ ದಿನ ಅಖಂಡ ಕರ್ನಾಟಕ ರಚನೆಯಾದ ದಿನ, ರಕ್ತದಾನ ಮಾಡುವ ಮೂಲಕ ಈ ದಿನದ ಆಚರಣೆಯು ಅರ್ಥಪೂರ್ಣವಾಗಿದೆ’’ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡುತ್ತಾ, ಇಂದು ಬೆಳಿಗ್ಗೆÀÉಯಿಂದಲೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಈ ದಿನವನ್ನು ವೇದಿಕೆಯು ಅರ್ಥಪೂರ್ಣಗೊಳಿಸಿದೆ ಎಂದರು.
ವೃತ್ತ ನಿರೀಕ್ಷಕ ಕ್ಯಾತೇಗೌಡರು ನಾಡು ನುಡಿಯ ರಕ್ಷಣೆಗಾಗಿ ಹೋರಾಟ ಮಾಡುವಾಗ ನ್ಯಾಯಪರವಾಗಿ ಮಾಡಿ ಎನ್ನುವ ಕಿವಿಮಾತುಗಳನ್ನು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಗದೀಶ್ ರಕ್ತದಾನಕ್ಕೂ, ನಾಡು ನುಡಿಯ ಹೋರಾಟಕ್ಕೂ ಸದಾ ನಮ್ಮ ರಕ್ಷಣಾ ವೇದಿಕೆ ಸಿದ್ದ ಎನ್ನುವ ಅಭಯವನ್ನಿತ್ತರು.
ಈ ಸಂದರ್ಭ ೫೯ ಬಾರಿ ರಕ್ತದಾನ ಮಾಡಿದ ರವಿಕುಮಾರ್, ೩೮ ಬಾರಿ ರಕ್ತದಾನ ಮಾಡಿದ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ವೀರಾಜಪೇಟೆಯ ಗ್ರಾಮಾಂತರ ಠಾಣೆಯ ಪಿ.ಎಸ್.ಐ ವೀಣಾ ನಾಯಕ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಗಳು ರಕ್ತದಾನ ಮಾಡಿ ಸಾರ್ವಜನಿಕರಿಗೆ ಹುರುಪು *ಗೋಣಿಕೊಪ್ಪಲು: ಕನ್ನಡ ಗೀತೆಗಳ ನೃತ್ಯ, ಸಂಗೀತ, ಮೆರವಣಿಗೆ ಮೂಲಕ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವರ್ಣರಂಜಿತವಾಗಿ ಆಚರಿಸಲಾಯಿತು. ಸ್ಥಳೀಯ ಮಹಾಗಣಪತಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟçಧ್ವಜ ಮತ್ತು ನಾಡ ಧ್ವಜಾರೋಹಣ ಮಾಡಿದ ಬಳಿಕ ಕನ್ನಡ ಧ್ವಜ ಹಿಡಿದು ಗ್ರಾಮದ ಮುಖ್ಯ ರಸ್ತೆಯಲ್ಲಿ ನಾಡು ನುಡಿ ಬಗ್ಗೆ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿ ಗಳೊಂದಿಗೆ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಪದಾಧಿಕಾರಿ ಗಳು, ಮಹಾಗಣಪತಿ ಯುವಕ ಸಂಘದ ಸದಸ್ಯರು, ಶಿಕ್ಷಕರು ಕನ್ನಡ ಧ್ವಜ ಹಿಡಿದು ಮುನ್ನಡೆದರು.
ಬಳಿಕ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ ದೇಶ - ವಿದೇಶಗಳಲ್ಲಿಯೂ ಕನ್ನಡ ಸಂಘಗಳಿದ್ದು ಅವುಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲಾಗುತ್ತಿದೆ. ಕನ್ನಡದ ಬೆಳವಣಿಗೆಗೆ ವಿವಿಧ ಸಂಘಸAಸ್ಥೆಗಳು ಮುಂಚೂಣಿಯಲ್ಲಿ ನಿಂತಿವೆ. ಇದು ಶ್ಲಾಘನೀಯ ಎಂದು ನುಡಿದರು.
ಸಂಘದ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ ಕನ್ನಡಿಗರು ತಮ್ಮ ಭಾಷೆಯಲ್ಲಿ ಮಾತನಾಡಿದರೆ ಅನ್ಯ ಭಾಷಿಗರೂ ಕನ್ನಡ ಕಲಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕಾಫಿ ಬೆಳೆಗಾರ ಕಳ್ಳಿಚಂಡ ಪ್ರಕಾಶ್ ಮಾತನಾಡಿ ‘‘ಕನ್ನಡ ಕವಿಗಳು ನಾಡು ನುಡಿ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಕನ್ನಡ ಭಾಷೆ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು’’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಪೋಡಮಾಡ ಸುಕೇಶ್, ಪ್ರಾಂಶುಪಾಲ ಡಾ. ಜೆ.ಸೋಮಣ್ಣ, ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್ ಮಾತನಾಡಿದರು.
ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹ ಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್ ನಿರ್ದೇಶಕ ಮಾಚಂಗಡ ಸುಜಾ ಪೂಣಚ್ಚ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಮಹಾಗಣಪತಿ ಯುವಕ ಸಂಘದ ಪದಾಧಿಕಾರಿಗಳಾದ ಚೇತನ್, ರಾಜು, ಗಣಪತಿ ಹಾಜರಿದ್ದರು. ಕಲಾವಿದರಾದ ಮುಬಾರಕ್, ಸತೀಶ್ ಹಾಡಿದ ಕನ್ನಡ ಗೀತೆಗಳು, ರೂಪ ಅವರ ನೃತ್ಯ ಹಾಗೂ ಇತರ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸಭಿಕರನ್ನು ರಂಜಿಸಿದವು.