ಮಡಿಕೇರಿ, ನ. ೩: ಅತ್ಯಂತ ಅವೈಜ್ಞಾನಿಕವಾದ ಎಪಿಎಲ್-ಬಿಪಿಎಲ್ ಮಾನದಂಡವನ್ನು ತೆಗೆದು ಹಾಕುವ ಮೂಲಕ ಸಾರ್ವತ್ರಿಕವಾದ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಸಿಪಿಐ (ಎಂ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಇ.ರ ದುರ್ಗಾ ಪ್ರಸಾದ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯೋಪಯೋಗಿ ಸರಕುಗಳ ಬೆಲೆ ಏರುತ್ತಿರುವದರ ಹಿನ್ನೆಲೆಯಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಪಡಿತರ ವ್ಯವಸ್ಥೆಯನ್ನು ಜಾರಿಗೆ ಬಂದಿದೆ. ಇಂತಹ ವ್ಯವಸ್ಥೆಗೆ ಎಪಿಎಲ್ ಬಿಪಿಎಲ್ ಎನ್ನುವ ಮಾನದಂಡವೇ ತೊಡಕಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.
ಪಡಿತರ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ಯಾವಾಗಲೂ ತಲೆದೋರುತ್ತಿರುತ್ತದೆ. ಇದರಿಂದಾಗಿ ಒಂದು ದಿನಕ್ಕೆ ಕೆಲವೊಮ್ಮೆ ಕೇವಲ ೮-೧೦ಪಡಿತರ ಚೀಟಿದಾರರಿಗೆ ಪಡಿತರ ದೊರೆತು ಉಳಿದವರು ಮತ್ತೆ ಬರಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ. ಈ ಅವ್ಯವಸ್ಥೆಯಿಂದಾಗಿ ಒಬ್ಬ ಒಂದಕ್ಕಿAತ ಹೆಚ್ಚು ದಿನ ರಜೆ ಮಾಡಬೇಕಾಗಿ ಬಂದು ೩೦೦ ರೂ.ವಿನ ಸರಕುಗಳಿಗಾಗಿ ಅದಕ್ಕೆ ಎರಡರಷ್ಟು ಅಥವಾ ಮೂರರಷ್ಟು ಹಣ ಖರ್ಚುಮಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ (ಎಂ) ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎ.ಸಿ. ಸಾಬು ಉಪಸ್ಥಿತರಿದ್ದರು.