ನಾಪೋಕ್ಲು, ನ. ೩: ಪ್ರತಿಯೊಬ್ಬ ಮನುಷ್ಯನು ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಹೇಳಿದರು.
ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘ, ರಾಮ ಟ್ರಸ್ಟ್ ಶಾಲೆ, ಐ.ಎನ್.ಎ. ಕೊಡಗು, ಐ.ಡಿ.ಎ. ಕೊಡಗು, ಕೊಡವ ಸಮಾಜ ನಾಪೆÉÇÃಕ್ಲು ರೆಕ್ರಿಯೇಷನ್ ಕ್ಲಬ್, ರೋಟರಿ ಇನ್ನರ್ ವೀಲ್, ಕೊಡಗು ಮೆಡಿಕಲ್ ಇನ್ಸಿ÷್ಟಟ್ಯೂಟ್ ಆಫ್ ಡೆಂಟಲ್ ಮತ್ತು ಸುಯೋಗ್ ಆಸ್ಪತ್ರೆ ಮೈಸೂರು ಮತ್ತು ಹೆಚ್.ಸಿ.ಜಿ. ಬೆಂಗಳೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಮತ್ತು ಉಚಿತ ದಂತ ಚಿಕಿತ್ಸೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಇಲ್ಲಿ ಯಾವದೇ ರೋಗದ ಬಗ್ಗೆ ತಪಾಸಣೆ ನಡೆಸಿದ ನಂತರ ಸರಕಾರಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಕೈಗೊಂಡರೆ ಅದಕ್ಕೆ ನಾವು ಸ್ಪಂದಿಸುವದಾಗಿ ಹೇಳಿದರು.
ಕೊಡಗು ಜಿಲ್ಲಾ ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ. ಲೋಕೇಶ್ ಮಾತನಾಡಿ, ಇಂತಹ ಉಚಿತ ಶಿಬಿರದಲ್ಲಿ ಚಿಕಿತ್ಸೆಗೆ ಒಳಪಡುವ ರೋಗಿಗಳು ನಮ್ಮ ಮೆಡಿಕಲ್ ಕಾಲೇಜಿಗೆ ಬಂದರೆ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತವಾಗಿ ಆರೋಗ್ಯ ವ್ಯವಸ್ಥೆಯನ್ನು ನೀಡಲಾಗುವದು ಎಂದು ತಿಳಿಸಿದರು. ಇಂತಹ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಅವರು ಕೋರಿದರು.
ಈ ಸಂದರ್ಭ ಗಣ್ಯರಾದ ಬಿದ್ದಾಟಂಡ ಸುಮನ್ ಪ್ರದೀಪ್, ನಿಮ್ಮಿ ಪೂವಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧಕ್ಷತೆಯನ್ನು ರಾಮ ಟ್ರಸ್ಟ್ ಶಾಲೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಡಾ. ಮೋಹನ್ ಅಪ್ಪಾಜಿ, ಡಾ. ಕೆಲೇಟಿರ ಎಂ. ಬೋಪಣ್ಣ, ಡಾ. ವಿನೋದ್ ಅಪ್ಪಯ್ಯ, ಡಾ. ಬೆಳ್ಯಪ್ಪ, ಇನ್ನರ್ ವೀಲ್ ಅಧ್ಯಕ್ಷೆ ಸ್ಮಿತಾ ಮೋಹನ್, ಕೊಡವ ಸಮಾಜ ರೆಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಶಾಲೆಯ ಉಪಾಧ್ಯಕ್ಷ ಹ್ಯಾರಿ ಮಂದಣ್ಣ, ಪ್ರಾಂಶುಪಾಲೆ ಕಲ್ಯಾಟಂಡ ಶಾರದ ಮತ್ತಿತರರು ಇದ್ದರು.
ಶಿಬಿರದಲ್ಲಿ ಪಾಲ್ಗೊಂಡ ವೈದ್ಯರು: ಡಾ. ಹೆಮಂತ್, ಡಾ. ರಾಜೇಂದ್ರ ಪ್ರಸಾದ್, ಡಾ. ಹರ್ಷ, ಡಾ. ನಂದ ಎಸ್, ಸಿಂಗೆ, ಡಾ. ಸುದೀರ್, ಡಾ. ಅಭಿಜಿತ್, ಡಾ. ಬೆಳ್ಯಪ್ಪ, ಡಾ. ರಾಜೇಶ್, ಡಾ. ಶಿವ ಕುಮಾರ್, ಡಾ. ಜ್ಯೋತಿ, ಡಾ. ಫಾರೀನಾ, ಡಾ. ಮಂಜುನಾಥ್, ಡಾ. ಗೌತಮ್, ಡಾ. ಪ್ರಶಾಂತ್, ಡಾ. ವಿನಯ್, ಟೆಕ್ನಿಶಿಯನ್ ದಿನೇಶ್, ತೇಜಸ್ ಗೌಡ, ದಿಲೀಪ್, ಶಾಲೆಯ ಶಿಕ್ಷಕಿಯರಾದ ಚಂದ್ರಕಲಾ, ಕಾಳಯ್ಯ. ಭಗವತಿ ಪ್ರಸಾದ್, ಚೋಕಿರ ಯಾನ ಇದ್ದರು.