ಮಡಿಕೇರಿ, ನ. ೩: ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ವತಿಯಿಂದ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಮೇಲಿನ ಶೋಷಣೆ ತಡೆಯುವ ನಿಟ್ಟಿನಲ್ಲಿ ಬಹಳಷ್ಟು ಕಾಯ್ದೆ ಕಾನೂನುಗಳು ಜಾರಿಯಲ್ಲಿವೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ. ರಾಧ ಮಾತನಾಡಿ, ತೊಂದರೆ ಇದ್ದರೆ ಪೋಷಕರಿಗೆ ಅಥವಾ ಗುರುಗಳಿಗೆ ತಿಳಿಸಿ. ಮಕ್ಕಳ ಹಕ್ಕುಗಳ ವಿರೋಧವಾಗಿ ಯಾವದಾದರು ಘಟನೆ ಕಂಡುಬAದರೆ ಮಕ್ಕಳ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಮಾತನಾಡಿ, ಹದಿಹರೆಯದ ಮಕ್ಕಳ ಸಮಸ್ಯೆ ಹಾಗೂ ಅವರು ಎದುರಿಸುವ ಸವಾಲುಗಳನ್ನು ಮಕ್ಕಳ ಪ್ರತಿನಿಧಿಗಳು ತಿಳಿಯಪಡಿಸಲ್ಲಿದ್ದಾರೆ. ಹದಿಹರೆಯ ಎಂಬದು ಬಾಲ್ಯಾವಸ್ಥೆಯಿಂದ ಫ್ರೌಡಾವಸ್ಥೆಗೆ ತಲಪುವ ಪ್ರಮುಖ ಘಟ್ಟ. ಬಹಳಷ್ಟು ಬದಲಾವಣೆಯಾಗುತ್ತದೆ. ದೈಹಿಕ ಬದಲಾವಣೆ ಮಾತ್ರವಲ್ಲದೆ ಮಾನಸಿಕ ಬದಲಾವಣೆಯಾಗುತ್ತದೆ. ಆ ಸಂದರ್ಭದಲ್ಲಿ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ ಪ್ರೀತಿ-ಪ್ರೇಮ, ಶೈಕ್ಷಣಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರಿನ ಸದಸ್ಯೆ ಲಕ್ಷಿö್ಮ ಪ್ರಸನ್ನ, ಶಿಕ್ಷಣ ಅಧಿಕಾರಿ ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎA. ಯತ್ನಟ್ಟಿ, ಎಸ್‌ಜೆಎಂಪಿ ಘಟಕದ ಸುಮತಿ ಹಾಗೂ ಮಹೇಶ್ ಇತರರು ಇದ್ದರು.