ಮಡಿಕೇರಿ, ನ. ೪: ಬಿಳುಗುಂದ ಗ್ರಾಮ ಪಂಚಾಯಿತಿಯ ೨೦೧೯-೨೦ನೇ ಸಾಲಿನ ಬಿಳುಗುಂದ, ನಲ್ವತೋಕ್ಲು, ಹೊಸಕೋಟೆ ಗ್ರಾಮಗಳ ಗ್ರಾಮ ಸಭೆ ಹಾಗೂ “ಸಬ್ ಕೀ ಯೋಜನಾ ಸಬ್ ಕಾ ವಿಕಾಸ್” ಹಾಗೂ ೨೦೨೦-೨೧ರ ನಮ್ಮಗ್ರಾಮ ನಮ್ಮಯೋಜನೆಯನ್ನು ಸಿದ್ಧಪಡಿಸುವ ಕುರಿತು ಗ್ರಾಮ ಸಭೆ ತಾ.೬ರಂದು (ನಾಳೆ) ಪೂರ್ವಾಹ್ನ ೧೧ ಗಂಟೆಗೆ ಬಿಳುಗುಂದ ಗ್ರಾ. ಪಂ. ಅಧ್ಯಕ್ಷೆ ಕೆ.ಎ. ಅಲೀಮ ಅವರ ಅಧ್ಯಕ್ಷತೆಯಲ್ಲಿ, ನೋಡಲ್ ಅಧಿಕಾರಿಯ ಪ್ರೀತಿ ಚಿಕ್ಕಮಾದಯ್ಯ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ, ಇವರ ಸಮ್ಮುಖದಲ್ಲಿ ಬಿಳುಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.