ಮಡಿಕೇರಿ. ನ. ೪ : ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆ ವತಿಯಿಂದ ತಾ. ೯ ರಂದು ಕ್ಯಾಲಿಗ್ರಫಿ ಪ್ರದರ್ಶನ ಆಯೋಜಿಸಲಾಗಿದೆ.
ಸಂಜೆ ೫ ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ಹಿರಿಯ ಸಾಹಿತಿ ನಾಗೇಶ್ ಕಾಲೂರು, ಆಕಾಶವಾಣಿ ಉದ್ಘೋಷಕರಾದ ಸುಬ್ರಾಯಸಂಪಾಜೆ, ಶಾರದಾ ನಂಜಪ್ಪ ಚಾಲನೆ ನೀಡಲಿದ್ದಾರೆ. ಕ್ಯಾಲಿಗ್ರಫಿ ಪ್ರದರ್ಶನವು ತಾ.೧೦ ಮತ್ತು ೧೧ ರಂದು ಸಾರ್ವಜನಿಕರಿಗೆ ಬೆಳಿಗ್ಗೆ ೧೧ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದು ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆಯ ಮುಖ್ಯಸ್ಥೆ ನಮಿತಾ ರಾವ್ ತಿಳಿಸಿದ್ದಾರೆ.