ಮಡಿಕೇರಿ, ನ. ೩: ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕಳೆದ ರಾತ್ರಿ ‘ರೇವ್ ಪಾರ್ಟಿ’ ನಡೆಸುತ್ತಿದ್ದ ಪ್ರಕರಣವೊಂದು ವರದಿಯಾಗಿದ್ದು, ಈ ಸ್ಥಳದ ಮೇಲೆ ಪೊಲೀಸ್ ದಾಳಿ ನಡೆದಿದೆ. ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ವೀರಾಜಪೇಟೆ ಉಪವಿಭಾಗದ ಪೊಲೀಸರು ಈ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿರುವದಲ್ಲದೆ, ರೇವ್‌ಪಾರ್ಟಿಗೆ ಬಳಸಲಾಗುತ್ತಿದ್ದ ಮಾದಕ ಪದಾರ್ಥಗಳು, ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ನಲ್ಲೂರುವಿನ ಪುಳ್ಳಂಗಡ ವಿವೇಕ್ ಎಂಬವರಿಗೆ ಸೇರಿದ ವೈಲ್ಡ್ ಹೆವೆನ್ ಹೋಂ ಸ್ಟೇಯಲ್ಲಿ ಈ ಪ್ರಕರಣ ನಡೆಯುತ್ತಿತ್ತು.ನಲ್ಲೂರು ಗ್ರಾಮದ ಪುಳ್ಳಂಗಡ ಮುತ್ತಪ್ಪ @ ವಿವೇಕ್, ಎಲ್. ನಿತೀಶ್ ಹಾಗೂ ಬಿ. ಭರತ್ ಚಂದ್ರ ಅವರುಗಳು ರೇವ್ ಪಾರ್ಟಿಯನ್ನು ಆಯೋಜಿಸಿ ಸದರಿ ಪಾರ್ಟಿಗೆ ಸಂಬAಧಿಸಿದAತೆ ಪ್ಲೆöÊಯರ್‌ಗಳನ್ನು ತಯಾರಿಸಿ ಇಂಟರ್‌ನೆಟ್ ಹಾಗೂ ವಾಟ್ಸಾಪ್ ಮುಖಾಂತರ ರೇವ್ ಪಾರ್ಟಿ ವಿಷಯವನ್ನು ತಮ್ಮ ಆಪ್ತ ವಲಯದಲ್ಲಿ ಹರಿಯಬಿಟ್ಟಿದ್ದರು. ಈ ಪಾರ್ಟಿಯಲ್ಲಿ ಭಾಗವಹಿಸಲು ಚಂಡಿಗಡÀ, ಚೆನ್ನೆöÊ, ಹೈದರಾಬಾದ್, ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯರು ಕೊಡಗಿಗೆ ಬಂದ ಬಗ್ಗೆ ಮಾಹಿತಿ ಕಲೆ ಹಾಕಿದ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿ, ಪೊಲೀಸ್ ಅಧೀಕ್ಷಕರು ಹಾಗೂ ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಹಾಗೂ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: ೧೨೪/೨೦೧೯ ಕಲಂ ೨೯ (ಬಿ) ಎನ್‌ಡಿಪಿಎಸ್ ಕಾಯ್ದೆ, ೩೪ ಅಬಕಾರಿ ಕಾಯ್ದೆ ಹಾಗೂ ೧೮೮ ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳ ವಿವರ: ಪುಳ್ಳಂಗಡ ಕೆ. ಮುತ್ತಪ್ಪ @ ವಿವೇಕ್ (೪೫) ವ್ಯವಸಾಯ ವೃತ್ತಿ, ವಾಸ ವೈಲ್ಡ್ ಹೆವೆನ್ ಹೋಂ ಸ್ಟೇ, ನಲ್ಲೂರು ಗ್ರಾಮ ಪೊನ್ನಂಪೇಟೆ ಹೋಬಳಿ, ಎಲ್. ನಿತೀಶ್ (೨೩), ತಂದೆ ಎನ್.ವಿ. ರಾಮಣ್ಣ ರೆಡ್ಡಿ ವಿಜ್ಞಾನ ಭಾರತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂ.ಎಸ್. ವಿದ್ಯಾರ್ಥಿ, ವಾಸ ಹೈದರಾಬಾದ್ ಹಾಗೂ ಬಿ. ಭರತ್ ಚಂದ್ರ (೨೨) , ತಂದೆ ವಿಘ್ನೇಶ್ವರ ರಾವ್ ಬಿಟೆಕ್ ವಿದ್ಯಾರ್ಥಿ ವಾಸ ಲೇಮನೆ ಪಾಡು ಗ್ರಾಮ, ಗುಂಟೂರು ತಾಲೂಕು, ಹೈದರಾಬಾದ್ ಇವರು ಬಂಧಿತ ಆರೋಪಿಗಳು. ಬಂಧಿತರಿAದ ೬೫ ಗ್ರಾಂ. ಒಣಗಿದ ಗಾಂಜಾ ಸೊಪ್ಪು, ರೇವ್ ಪಾರ್ಟಿ ಪ್ರವೇಶ ಶುಲ್ಕ ಹಾಗೂ ಗಾಂಜಾ ಮತ್ತು ಮದ್ಯ ಮಾರಾಟ ಮಾಡಿದ ೮೪ ಸಾವಿರ ನಗದು, ೨ ಮೊಬೈಲ್, ೨೧ ಬಿಯರ್ ಬಾಟಲಿ, ಓಂಕಾರ್ ಜನರೇಟರ್ ಸೆಟ್ ವಾಹನ, ೬ ಡಿಜೆ ಸೌಂಡ್ ಸಿಸ್ಟಮ್, ಪ್ರಚಾರಕ್ಕಾಗಿ ತಯಾರಿಸಿದ್ದ ಬ್ಯಾನರ್ ವಶಪಡಿಸಿಕೊಳ್ಳಲಾಗಿದೆ. ಪಾರ್ಟಿಯಲ್ಲಿ ಸುಮಾರು ೧೪೦ ಮಂದಿ ಪಾಲ್ಗೊಂಡಿದ್ದು, ೧೪ ಮಹಿಳೆಯರಿದ್ದರು.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಹಾಗೂ ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಎಎಸ್‌ಐ ಕೆ.ವೈ. ಹಮೀದ್, ಸಿಬ್ಬಂದಿಯವರಾದ ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್‌ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಅನಿಲ್‌ಕುಮಾರ್, ಮಹಿಳಾ ಸಿಬ್ಬಂದಿಗಳಾದ ಎಂ.ಬಿ. ಸುಮತಿ, ಮಮತ, ಚಾಲಕ ಶಶಿಕುಮಾರ್, ಇತರೆ ವಿಭಾಗದ ಸಿಬ್ಬಂದಿಯವರಾದ ರಾಜೇಶ್, ಗಿರೀಶ್, ಜೋಸೆಫ್, ಸಾಜಿ, ಜೋಸ್ ನಿಶಾಂತ್, ರಾಜ ಹಾಗೂ ಕುಟ್ಟ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ, ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕರಾದ ಡಿ.ಕುಮಾರ್, ಪ್ರಮೋದ್ ಕುಮಾರ್, ಸಿ.ಯು. ಸಾದಾಲಿ, ಸತೀಶ್, ಎಂ.ಡಿ. ಮನು, ಹರೀಶ್, ಕೆ.ಆರ್. ರಾಜೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇವರ ಕಾರ್ಯವನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಈ ಘಟನೆಯ ವಿವರವನ್ನು ಪೊಲೀಸ್ ಇಲಾಖೆ ಅಧಿಕೃತ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.